ADVERTISEMENT

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳಿಗೆ ಚಿತ್ರರಂಗದ ಸಾಧಕರ ಹೆಸರಿಡಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 9:42 IST
Last Updated 10 ಜುಲೈ 2022, 9:42 IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ   

ಬೆಂಗಳೂರು: ‘ಬಿಬಿಎಂಪಿ ವಾರ್ಡ್‌ಗಳು ಮರು ವಿಂಗಡಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾರ್ಡ್‌ಗಳಿಗೆ ಕನ್ನಡ ಚಿತ್ರರಂಗದ ಸಾಧಕರ ಹೆಸರುಗಳನ್ನಿಡಬೇಕು’ ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್‌ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಬಿಬಿಎಂಪಿ ವಾರ್ಡ್‌ಗಳಿಗೆ ಹೆಸರಿಡುತ್ತಿರುವುದು ಸ್ವಾಗತಾರ್ಹ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿಯೂ ಸಾಧಕರಿದ್ದಾರೆ. ಅವರನ್ನು ಗುರುತಿಸಿ ಹೆಸರಿಡಬೇಕು’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಪ್ರಮುಖ ಸಾಧಕರ ಪಟ್ಟಿ ಮತ್ತು ಅವರ ಸಾಧನೆಯ ವಿವರವನ್ನೂ ಹರೀಶ್‌ ನೀಡಿದ್ದಾರೆ. ಪ್ರಮುಖರ ಪಟ್ಟಿಯಲ್ಲಿ ಸುಬ್ಬಯ್ಯ ನಾಯ್ಡು, ಆರ್‌.ನಾಗೆಂದ್ರ ರಾವ್‌, ಗುಬ್ಬಿ ವೀರಣ್ಣ, ಲಕ್ಷ್ಮೀಬಾಯಿ, ಬಿ.ಆರ್‌. ಪಂತುಲು, ಎಂ.ವಿ.ರಾಜಮ್ಮ, ಪಂಡರಿಬಾಯಿ, ಡಾ.ರಾಜ್‌ಕುಮಾರ್‌, ಬಾಲಕೃಷ್ಣ, ನರಸಿಂಹರಾಜು, ಕಲ್ಯಾಣಕುಮಾರ್‌, ಉದಯ್‌ಕುಮಾರ್‌, ಕೆಸಿಎನ್‌ ಗೌಡ, ಬಿ.ಎಸ್‌.ರಂಗಾ, ಹುಣಸೂರು ಕೃಷ್ಣಮೂರ್ತಿ, ಎಂ.ವಿ. ಕೃಷ್ಣಮೂರ್ತಿ, ಕೆ.ವಿ.ಗುಪ್ತಾ, ಆರ್‌.ಲಕ್ಷ್ಮಣ್‌, ಎಂ.ತಿಮ್ಮಯ್ಯ, ಆರ್‌.ವೀರಣ್ಣ, ಎನ್‌. ವೀರಸ್ವಾಮಿ, ಕೆ.ಸಿ.ಎನ್‌. ಚಂದ್ರಶೇಖರ್‌, ಮುಸುರಿ ಕೃಷ್ಣಮೂರ್ತಿ, ಪಾರ್ವತಮ್ಮ ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌, ವಜ್ರಮುನಿ, ಎಂ.ಪಿ.ಶಂಕರ್‌, ತೂಗುದೀಪ ಶಕ್ತಿಪ್ರಸಾದ್‌, ಎಸ್‌.ಶಿವರಾಮ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಸಂಚಾರಿ ವಿಜಯ್‌, ಪುನೀತ್‌ ರಾಜ್‌ಕುಮಾರ್‌, ಚಿರಂಜೀವಿ ಸರ್ಜಾ, ಅಬ್ಬಾಯಿನಾಯ್ಡು ಎ.ಎಲ್‌., ಕೆ.ಎಸ್‌.ಅಶ್ವತ್ಥ್‌, ಚಿ. ಉದಯ್‌ ಶಂಕರ್‌, ಕಲ್ಪನಾ, ಬಿ.ವಿ.ಕಾರಂತ್‌, ಜಯಂತಿ, ಮಂಜುಳಾ, ಲೋಕೇಶ್‌ ಅವರ ಹೆಸರುಗಳನ್ನುಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.