ADVERTISEMENT

ಅರ್ಜುನ್‌ ಜನ್ಯಗೆ ಯಶಸ್ವಿ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:12 IST
Last Updated 27 ಫೆಬ್ರುವರಿ 2020, 19:12 IST
ಅರ್ಜುನ್ ಜನ್ಯ
ಅರ್ಜುನ್ ಜನ್ಯ   

ಮೈಸೂರು: ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರು ಇಲ್ಲಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.

39 ವರ್ಷ ವಯಸ್ಸಿನ ಅವರು ಹೊಟ್ಟೆ, ತಲೆ, ಬೆನ್ನು ಹಾಗೂ ಎದೆನೋವಿನ ಕಾರಣದಿಂದಾಗಿ ಫೆ. 23ರಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ವೈದ್ಯರು ಗ್ಯಾಸ್ಟ್ರಿಕ್‌ ಸಮಸ್ಯೆಗೆ ಚಿಕಿತ್ಸೆ ನೀಡಿದ್ದಾರೆ.

ಇಸಿಜಿ ಪರೀಕ್ಷೆಯ ಬಳಿಕ ಸಮಸ್ಯೆಯನ್ನು ಗುರುತಿಸಿ ಫೆ. 26 ರಂದು ತಡರಾತ್ರಿ 2 ಗಂಟೆ ಸುಮಾರಿನಲ್ಲಿ ಹೃದ್ರೋಗ ತಜ್ಞ ಡಾ.ಆದಿತ್ಯ ಉಡುಪ ಹಾಗೂ ತಂಡ ವಿವಿಧ ಪರೀಕ್ಷೆ ಹಾಗೂ ಚಿಕಿತ್ಸೆ ನಡೆಸಿ, ಸ್ಟೆಂಟ್ ಅಳವಡಿಸಿದೆ.

ADVERTISEMENT

‘ಇಸಿಜಿ ಪರೀಕ್ಷೆಯ ನಂತರ ಹೃದಯದಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು. ಆಗ ಕೊರೊನರಿ ಆ್ಯಂಜಿಯೊಗ್ರಾಂ ಪರೀಕ್ಷೆ ಮಾಡಿದೆವು. ಒಂದು ರಕ್ತನಾಳದಲ್ಲಿ ಶೇ 99ರಷ್ಟು ಬ್ಲಾಕೇಜ್ ಇರುವುದು ಗೊತ್ತಾಯಿತು. ಹೀಗಾಗಿ, ತಡರಾತ್ರಿಯೇ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ ನೆರವೇರಿಸಿದೆವು. ಎರಡು ತಾಸು ತಡವಾಗಿದ್ದರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತಿತ್ತು’ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.