ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಖ್ಯಾತಿಯಾಗಿರುವ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಅವರ ಲವ್ ಲೈಫ್ ಬಗೆಗಿನ ಗಾಳಿ ಸುದ್ದಿಗಳ ಕುರಿತು ನಟ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಮಲೈಕಾಜೊತೆ ಇರುವ ಫೋಟೊವನ್ನು ಶೇರ್ ಮಾಡಿದ್ದಾರೆ. ’ ಇಲ್ಲಿ ಗಾಸಿಪ್ ಸುದ್ದಿಗಳಿಗೆ ಅವಕಾಶ ಇಲ್ಲ. ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಆರೋಗ್ಯವಾಗಿರಿ, ಲವ್ ಯು ಆಲ್" ಎಂದು ಬರೆದು ಕೊಂಡಿದ್ದಾರೆ.
ಸದ್ಯಕ್ಕೆ ಗಾಸಿಪ್ ಬಗೆಗಿನ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಬುಧವಾರ ಸುದ್ದಿ ಮಾಧ್ಯಮಗಳಲ್ಲಿ ಅರ್ಜುನ್ ಹಾಗೂ ಮಲೈಕಾ ದೂರವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.