ಮುಂಬೈ: ಜಾತಿನಿಂದನೆಯ ಆರೋಪ ಹೊತ್ತಿರುವ ನಟಿ ಯುವಿಕಾ ಚೌಧರಿ ವಿರುದ್ಧ #ArrestYuvikaChaudhary ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಕ್ಷಮೆ ಕೇಳಿದ ಬಳಿಕವೂ ಹಲವರು ಈ ಟ್ಯಾಗ್ ಬಳಸಿ ವಿಡಿಯೊ ಶೇರ್ ಮಾಡುತ್ತಿದ್ದಾರೆ.
‘ಓಂ ಶಾಂತಿ ಓಂ’ ಮತ್ತು ‘ದಿ ಶೌಕೀನ್ಸ್’ ಸಹಿತ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದ ಯುವಿಕಾ ಚೌಧರಿ, ವಿಡಿಯೊ ಬ್ಲಾಗ್ ಒಂದರಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ಯುವಿಕಾ, ವಿಡಿಯೋದಲ್ಲಿ ಜಾತಿನಿಂದನೆ ಪದ ಬಳಸಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದು, ಪದದ ಅರ್ಥ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಟಿಯ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೊ ಇದ್ದು, ಅದರಲ್ಲಿ ಜಾತಿನಿಂದನೆಯ ಪದ ಇರುವ ಭಾಗವನ್ನಷ್ಟೇ ತೆಗೆಯಲಾಗಿದೆ. ಆದರೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹೇಳಿಕೆ ಇರುವ ವಿಡಿಯೊ ಶೇರ್ ಆಗುತ್ತಿದೆ.
ಟ್ವಿಟರ್‌ನಲ್ಲಿ ಕ್ಷಮೆ ಕೋರಿರುವ ನಟಿ, ಯಾರದೇ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ, ಅಲ್ಲದೆ ನಾನು ಬಳಸಿದ್ದ ಪದದ ಅರ್ಥ ಕೂಡ ಗೊತ್ತಿರಲಿಲ್ಲ. ಈ ಬಗ್ಗೆ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ ಟ್ವಿಟರ್‌ನಲ್ಲಿ #ArrestYuvikaChaudhary ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.