ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಆರ್ಯನ್‌ಗೆ ಜಾಮೀನು ದೊರೆಯುತ್ತಿದ್ದಂತೆ ಶಾರುಕ್ ಅವರ ಮುಂಬೈ ನಿವಾಸದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ.
ಬಾಲಿವುಡ್ ತಾರೆಗಳಾದ ಮಲೈಕಾ ಅರೋರಾ, ಸೋನು ಸೂದ್, ಸೋನಮ್ ಕಪೂರ್, ಸ್ವರಾ ಭಾಸ್ಕರ್, ಆರ್.ಮಾಧವನ್ ಸೇರಿದಂತೆ ಹಲವರು ಆರ್ಯನ್ ಖಾನ್‌ಗೆ ಜಾಮೀನು ದೊರೆತದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಮಾಧವನ್, 'ದೇವರಿಗೆ ಧನ್ಯವಾದಗಳು. ಒಬ್ಬ ತಂದೆಯಾಗಿ ನಾನು ತುಂಬಾ ಸಮಾಧಾನಗೊಂಡಿದ್ದೇನೆ. ಎಲ್ಲಾ ಒಳ್ಳೆಯ ಮತ್ತು ಸಕಾರಾತ್ಮಕ ಸಂಗತಿಗಳು ಸಂಭವಿಸಲಿ' ಎಂದು ಹೇಳಿದ್ದಾರೆ.
'ಕಾಲವು ನ್ಯಾಯವನ್ನು ನೀಡಿದಾಗ, ಯಾರಿಗೂ ಸಾಕ್ಷಿಗಳ ಅಗತ್ಯವಿಲ್ಲ' ಎಂದು ಸೋನು ಸೂದ್ ತಿಳಿಸಿದ್ದಾರೆ.
ಸೋನಂ ಕಪೂರ್ ಅವರು ಆರ್ಯನ್ ಮತ್ತು ಗೌರಿ ಖಾನ್‌ರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಸ್ವರಾ ಭಾಸ್ಕರ್ 'ಫೈನಲಿ' ಎಂದು ಟ್ವೀಟಿಸಿದ್ದಾರೆ.
ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿತ್ತು ಎನ್ನಲಾದ ಡ್ರಗ್ಸ್ ಪಾರ್ಟಿಗೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ಅಧಿಕಾರಿಗಳು ಈ ತಿಂಗಳ 3ರಂದು ದಾಳಿ ನಡೆಸಿದ್ದರು. ಈ ದಾಳಿಯ ಸಂದರ್ಭದಲ್ಲಿ ಆರ್ಯನ್ ಅವರನ್ನು ಬಂಧಿಸಲಾಗಿತ್ತು. 25 ದಿನಗಳ ಬಳಿಕ ಅವರಿಗೆ ಜಾಮೀನು ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.