ಬೆಂಗಳೂರು: ಬಿಗಿಲ್, ಮರ್ಸಲ್ ಖ್ಯಾತಿಯ ಕಾಲಿವುಡ್ ನಿರ್ದೇಶಕ ಆಟ್ಲಿ (ಅರುಣ್ ಕುಮಾರ್) ಇತ್ತೀಚೆಗೆ ನಡೆದ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು.
ಪತ್ನಿ ಪ್ರಿಯಾ ಅವರೊಂದಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಕಪ್ಪು ಬಣ್ಣದ ದಿರಿಸಿನಲ್ಲಿ ಅಂತರರಾಷ್ಟ್ರೀಯ ಫೋಟೊಗ್ರಾಫರ್‌ಗಳ ಎದುರು ಪೋಸ್ ಕೊಟ್ಟು ಗಮನ ಸೆಳೆದರು.
ಆಟ್ಲಿ ಅವರು ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಸದ್ಯ ಆಟ್ಲಿ ಅವರು ಶಾರುಕ್ ಖಾನ್ ಮುಖ್ಯಪಾತ್ರದಲ್ಲಿರುವ ‘ಜವಾನ್’ ಎಂಬ ಬಹುನಿರೀಕ್ಷಿತ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮೇಲೆ ಇಡೀ ಬಾರತೀಯ ಚಿತ್ರರಂಗವಲ್ಲದೇ ಹಾಲಿವುಡ್ ಕೂಡ ದೃಷ್ಟಿ ನೆಟ್ಟಿದೆ.
ಮದುರೈ ಮೂಲದ 36 ವರ್ಷದ ಆಟ್ಲಿ ಅವರು ಇದುವರೆಗೆ ತೇರಿ, ಬಿಗಿಲ್, ಮರ್ಸಲ್ ಸೇರಿದಂತೆ 5 ಸಿನಿಮಾಗಳನ್ನು ಮಾತ್ರ ನಿರ್ದೇಶನ ಮಾಡಿದ್ದು ಅವೆಲ್ಲ ಸೂಪರ್ ಹಿಟ್ ಆಗಿವೆ.
ಫ್ರಾನ್ಸ್‌ನ ಕಾನ್‌ನಲ್ಲಿ ಪ್ರತಿವರ್ಷ ನಡೆಯುವ ‘ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವ’ ಪ್ರತಿ ವರ್ಷ ಜಾಗತಿಕವಾಗಿ ಗಮನ ಸೆಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.