ADVERTISEMENT

ಬ್ಯಾಚ್ಯುಲರ್‌ ಹುಡುಗರ ಹುಡುಗಾಟ: ನಟ ಯೋಗಿ ಸಂದರ್ಶನ

ವಿನಾಯಕ ಕೆ.ಎಸ್.
Published 25 ಜನವರಿ 2024, 22:46 IST
Last Updated 25 ಜನವರಿ 2024, 22:46 IST
   

ದಿಗಂತ್‌, ಅಚ್ಯುತ್‌ ರಾವ್‌ ಜೊತೆ ಲೂಸ್‌ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾ ಇಂದು (ಜ.26) ತೆರೆ ಕಾಣುತ್ತಿದೆ. ಸಿನಿಮಾದಲ್ಲಿ ಹುಡುಗರ ಹಾವಳಿ ಕುರಿತು, ತಮ್ಮ ಸಿನಿಪಯಣದ ಬಗ್ಗೆ ಯೋಗಿ ಮಾತಿಗೆ ಸಿಕ್ಕಿದ್ದು ಹೀಗೆ...

ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ದಿಗಂತ್‌, ಅಚ್ಯುತ್‌ ರಾವ್‌ ಜೊತೆ ಲೂಸ್‌ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾ ಇಂದು (ಜ.26) ತೆರೆ ಕಾಣುತ್ತಿದೆ. ಸಿನಿಮಾದಲ್ಲಿ ಹುಡುಗರ ಹಾವಳಿ ಕುರಿತು, ತಮ್ಮ ಸಿನಿಪಯಣದ ಬಗ್ಗೆ ಯೋಗಿ ಮಾತಿಗೆ ಸಿಕ್ಕಿದ್ದು ಹೀಗೆ...

ADVERTISEMENT

ಬ್ಯಾಚ್ಯುಲರ್‌ ಹುಡುಗನ ಪಾತ್ರ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವ್ಯಕ್ತಿ. ಜೀವನದಲ್ಲಿ ಪ್ರೇಮ ವಿಫಲವಾಗಿ ಹುಡುಗಿಯರನ್ನು ಕಂಡರೆ ಆಗುತ್ತಿರುವುದಿಲ್ಲ. ‘ನಿನಗೆ ನನಗಿಂತ ಒಳ್ಳೆ ಹುಡುಗನ ಸಿಗುತ್ತಾನೆ ಬಿಡು’ ಎಂದು ಯಾಮಾರಿಸಿ ಹೋದ ಹುಡುಗಿಯಿಂದ ನೊಂದಿರುತ್ತಾನೆ. ಹೀಗಾಗಿ ಹುಡುಗಿಯರಿಂದ ದೂರ ಇರುತ್ತಾನೆ. ಜೊತೆಗೆ ಸಿಕ್ಕಾಪಟ್ಟೆ ತಲೆಹರಟೆ ಪಾತ್ರ. ಒಟ್ಟಿನಲ್ಲಿ ನಗಿಸುವ ಪಾತ್ರ. 

ಚಿತ್ರದ ಟ್ರೇಲರ್‌ನಲ್ಲಿ ‘ಹ್ಯಾಂಗೋವರ್‌’ ಹೆಚ್ಚಾಗಿ ಇದೆ. ಈ ಸಿನಿಮಾದ ಚಿತ್ರೀಕರಣದ ಅನುಭವ ಹೇಗಿತ್ತು?
ಥಾಯ್ಲೆಂಡ್‌ನಲ್ಲಿ 15 ದಿನ ಚಿತ್ರೀಕರಣ ಬಹಳ ಮಜವಾಗಿತ್ತು. ದಿಗಂತ್‌, ಅಚ್ಯುತಣ್ಣ ಎಲ್ಲರೂ ಒಟ್ಟಿಗೆ ಇದ್ದೆವು. ಅಲ್ಲಿ ಬಹುತೇಕ ಸಿನಿಮಾಗಳು ಚಿತ್ರೀಕರಣಗೊಳ್ಳುವ ಮಾಮೂಲಿ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿಲ್ಲ. ಬದಲಿಗೆ ಹೊಸ ಜಾಗಗಳಲ್ಲಿ ಶೂಟಿಂಗ್‌ ನಡೆದಿದೆ. ‘ಹುಡುಗರು’ ಚಿತ್ರದ ನಂತರ ಮಾಡಿರುವ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನಿಂಗ್‌ ಸಿನಿಮಾ. ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ನೋಡಬಹುದು. ಅಸಹ್ಯಪಡುವಂತಹ ಡೈಲಾಗ್‌ಗಳು, ಸನ್ನಿವೇಶಗಳು ಇಲ್ಲ. ಪೂರ್ತಿ ಸಿನಿಮಾ ಹಾಸ್ಯದಿಂದ ಕೂಡಿದೆ.

ನಿಮ್ಮ 50ನೇ ಚಿತ್ರ ಯಾವ ಹಂತದಲ್ಲಿದೆ?

‘ರೋಸಿ’ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ. ಶ್ರೀನಗರ ಕಿಟ್ಟಿ ಮೊದಲಾದವರ ದೃಶ್ಯಗಳು ಚಿತ್ರೀಕರಣಗೊಳ್ಳುತ್ತಿವೆ.  ‘ಬ್ಯಾಚ್ಯುಲರ್‌..’ ಪ್ರಚಾರದಲ್ಲಿ ತೊಡಗಿರುವುದರಿಂದ ನನ್ನ ಭಾಗ ಇನ್ನೂ ಪ್ರಾರಂಭಗೊಂಡಿಲ್ಲ. ಮಾರ್ಚ್‌ನಲ್ಲಿ ‘ರೋಸಿ’ ತಂಡ ಸೇರಿಕೊಳ್ಳುತ್ತೇನೆ.

ಇಲ್ಲಿಯತನಕ ಸಿನಿಪಯಣ ಹೇಗಿತ್ತು?

ಒಂದು ರೀತಿ ಚೆನ್ನಾಗಿತ್ತು. ತುಂಬ ಖುಷಿಯಿದೆ. ಕೆಲವು ಸಂದರ್ಭಗಳಲ್ಲಿ ಬೇಸರವೂ ಆಗಿದೆ. ಇಂಥ ಕೆಲ ಸಂದರ್ಭಗಳನ್ನು ಬಹಿರಂಗಪಡಿಸಿದ್ದೇನೆ. ಪ್ರತಿ ಸಿನಿಮಾವೂ ಭಿನ್ನ ಅನುಭವ. ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ. ಪ್ರತಿ ಸಿನಿಮಾವನ್ನು ಗೆಲ್ಲಬೇಕೆಂಬ ಛಲದೊಂದಿಗೆ ಮಾಡಿರುತ್ತೇವೆ. ಸರಿಯಾಗಿ ಬಿಡುಗಡೆಯಾಗದಿರುವುದು, ಪ್ರಚಾರದ ಕೊರತೆ, ನಮ್ಮ ಸಮಯ ಸರಿ ಇಲ್ಲದಿರುವಿಕೆಯಿಂದ ಒಳ್ಳೆ ಸಿನಿಮಾ ಸೋತಿದ್ದೂ ಇದೆ. ನಾವು ಸಿನಿಮಾ ಚೆನ್ನಾಗಿದೆ ಎಂದುಕೊಂಡಿರುತ್ತೇವೆ. ಆದರೆ ಪ್ರೇಕ್ಷಕರಿಗೆ ಅದು ಇಷ್ಟವಾಗಿರುವುದಿಲ್ಲ. ಎಲ್ಲವೂ ಪ್ರೇಕ್ಷಕರ ಕೈಯ್ಯಲಿದೆ. ನಾವು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತ ಹೋಗಬೇಕಷ್ಟೆ.

ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಬಹುದೇ?

‘ರೋಸಿ’ ಚಿತ್ರೀಕರಣ ಪ್ರಾರಂಭವಾಗಿದೆ. ‘ಸಿದ್ಲಿಂಗು–2’ ಸಿನಿಮಾ ಪ್ರಾರಂಭವಾಗಲಿದೆ. ‘ಕಂಸ’ ಎನ್ನುವ ಸಿನಿಮಾವನ್ನು ನಮ್ಮದೇ ನಿರ್ಮಾಣ ಸಂಸ್ಥೆಯಿಂದ ಮಾಡಬೇಕಿತ್ತು. ಕಾರಣಾಂತರಗಳಿಂದ ತಡವಾಯ್ತು. ಈಗ ಅದರ ಕೆಲಸ ಕೂಡ ಶುರುವಾಗಿದೆ. ಇದರ ಹೊರತಾಗಿ ಕೆಲವು ಕಥೆಗಳನ್ನು ಕೇಳಿರುವೆ. ಕೆಲಸ ನಿರಂತರವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.