’ಬಚ್ಪನ್ ಕಾ ಪ್ಯಾರ್’ ಹಾಡಿನ ಖ್ಯಾತಿಯ ಉತ್ತರಾಖಂಡ ರಾಜ್ಯದ ಬಾಲಕ ಸಹದೇವ್ ಡಿರ್ಡೊ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚತ್ತೀಸ್ಗಡ ಜಿಲ್ಲೆಯ ಸುಕ್ಮಾ ನಗರದ ಸಮೀಪದಲ್ಲಿ ಮಂಗಳವಾರ ಸಂಜೆ ಸಹದೇವ್ ಮತ್ತು ಅವರ ತಂದೆ ಬೈಕ್ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಸಹದೇವ್ ಕೆಳಗೆ ಬಿದ್ದಿದ್ದುಅವರ ತಲೆಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹದೇವ್ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲ್ಮೆಟ್ ಧರಿಸಿಲ್ಲವಾದ್ದರಿಂದ ಸಹದೇವ್ ಗಾಯಗೊಂಡಿದ್ದಾನೆಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
10 ವರ್ಷದ ಸಹದೇವ್ ಶಾಲೆಯಲ್ಲಿ’ಬಚ್ಪನ್ ಕಾ ಪ್ಯಾರ್’ ಹಾಡನ್ನು ಹಾಡಿದ್ದರು. ಇದು ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಚತ್ತೀಸ್ಗಡ ಮುಖ್ಯಮಂತ್ರಿ ಅವರು ಕೂಡ ಈ ಬಾಲಕನಿಗೆ ಸನ್ಮಾನ ಮಾಡಿದ್ದರು.
ಈ ಹಾಡಿನಿಂದ ಖ್ಯಾತಿ ಪಡೆದಿದ್ದ ಸಹದೇವ್ಗೆ ಬಾಲಿವುಡ್ ಸಂಗೀತ ನಿರ್ದೇಶಕ ಬಾದ್ಶಾಹ ಸಿನಿಮಾವೊಂದರಲ್ಲಿ ಹಾಡಲು ಅವಕಾಶ ನೀಡಿದ್ದರು. ಸಹದೇವ್ ಅಪಘಾತದ ಬಗ್ಗೆ ಅವರು ಟ್ವೀಟ್ ಮಾಡಿದ್ದು ಸಹದೇವ್ ಜೊತೆ ನಾನು ಇದ್ದೇನೆ ಎಂದಿದ್ದಾರೆ.
’ಬಚ್ಪನ್ ಕಾ ಪ್ಯಾರ್’ ಹಾಡು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಜನಪ್ರಿಯತೆ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.