ಮುಂಬೈ: ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ(69) ಅವರು ಮುಂಬೈನಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
‘ಡಿಸ್ಕೊ ಕಿಂಗ್’ ಬಪ್ಪಿ ಲಹಿರಿ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಬಾಲಿವುಡ್‌ನ ಹಲವು ತಾರೆಯರು ಭೇಟಿ ನೀಡಿ ಶ್ರದ್ದಾಂಜಲಿ ಸಲ್ಲಿಸಿದರು.
ನಟಿ ಕಾಜೋಲ್, ಅವರ ತಾಯಿ ಹಾಗೂ ಹಿರಿಯ ನಟಿ ತನುಜಾ ಅವರು ಬಪ್ಪಿ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಗಾಯಕರಾದ ಶಾನ್, ಅಲ್ಕಾ ಯಾಗ್ನಿಕ್, ಸಂಗೀತ ಸಂಯೋಜಕ ಲಲಿತ್ ಪಂಡಿತ್, ನಿರ್ದೇಶಕ ರಾಕೇಶ್ ರೋಷನ್ ಬಪ್ಪಿ ಅವರ ಅಂತಿಮ ದರ್ಶನ ಪಡೆದರು.
ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.