ADVERTISEMENT

‘ಕಾವಲಿಗ’ನಾದ ಭೈರತಿ ರಣಗಲ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ಶಿವರಾಜ್‌ಕುಮಾರ್‌</p></div>

ಶಿವರಾಜ್‌ಕುಮಾರ್‌

   

ನಟ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನ.15ರಂದು ಬಿಡುಗಡೆ ಆಗುತ್ತಿದೆ. ಚಿತ್ರದ ‘ಕಾವಲಿಗ’ ಎಂಬ ಹಾಡು ಬಿಡುಗಡೆ ಯಾಗಿದ್ದು, ಪಾತ್ರಗಳನ್ನು ಹಾಡಿನ ಮೂಲಕ ಪರಿಚಯಿಸಲಾಗಿದೆ.

ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿಗೆ ವಿಜಯ್‌ ಪ್ರಕಾಶ್‌ ಧ್ವನಿಯಾಗಿದ್ದಾರೆ. ವಕೀಲರಾಗಿ ಶಿವರಾಜ್‌ಕುಮಾರ್‌, ವೈದ್ಯೆಯಾಗಿ ನಾಯಕಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ. ಇದು ಶಿವರಾಜ್‌ಕುಮಾರ್‌ ಅವರ ಈ ವರ್ಷದ ಎರಡನೇ ಸಿನಿಮಾ. ‘ಭೈರತಿ ರಣಗಲ್‌’ ಪಾತ್ರ ಸೃಷ್ಟಿಯಾಗುವ ಮುನ್ನ ಆತ ಏನಾಗಿದ್ದ ಎನ್ನುವ ಕಥೆಯನ್ನು ಈ ಹಾಡು ತೆರೆದಿಟ್ಟಿದೆ.

ADVERTISEMENT

‘ಮಫ್ತಿ’ ಸಿನಿಮಾದ‌ ಪ್ರೀಕ್ವೆಲ್ ಆಗಿರುವ ಈ ಸಿನಿಮಾವನ್ನು ‘ಗೀತಾ ಪಿಕ್ಚರ್ಸ್‌’ ಲಾಂಛನದಡಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ‘ವೇದ’ ಸಿನಿಮಾ ಬಳಿಕ ಗೀತಾ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ನರ್ತನ್ ನಿರ್ದೇಶನದ ಈ‌ ಚಿತ್ರದ ತಾರಾಬಳಗದಲ್ಲಿ ರಾಹುಲ್ ಬೋಸ್‍, ಅವಿನಾಶ್, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರಿದ್ದಾರೆ. ನವೀನ್ ಕುಮಾರ್ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.