ಇಂಡಿಯನ್, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ‘ಮಿಷನ್: ಚಾಪ್ಟರ್ 1’ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲಿದೆ.
ತಮಿಳು ನಾಯಕ ಅರುಣ್ ವಿಜಯ್ ನಟನೆಯ ಚಿತ್ರಕ್ಕೆ ನಿರ್ದೇಶಕ ತಲೈವಿ ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಕಿರುತೆರೆ ನಟ ಭರತ್ ಬೋಪಣ್ಣ ಈ ಚಿತ್ರದ ಖಳನಾಯಕರಲ್ಲೊಬ್ಬರಾಗಿದ್ದಾರೆ.
‘ವಿಜಯ್ ಅವರ ಹಿಂದಿನ ಚಿತ್ರಕ್ಕೆ ಆಡಿಷನ್ ನೀಡಿದ್ದೆ. ಆದರೆ ಆಯ್ಕೆಯಾಗಿರಲಿಲ್ಲ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ. ‘ಅಚ್ಚಂ ಎನ್ಬದು ಇಲ್ಲಯೇ’ ಎಂದು ಮೊದಲು ಚಿತ್ರಕ್ಕೆ ಶಿರ್ಷಿಕೆ ಇಡಲಾಗಿತ್ತು. ’ಭಯ ಎನ್ನುವುದೇ ಇಲ್ಲ‘ ಎಂದು ಇದರರ್ಥ. ಅರುಣ್ ವಿಜಯ್, ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಮಲಯಾಳಂ ನಟಿ ನಿಮಿಷಾ ಸಜಯನ್ ಕೂಡ ನಟಿಸಿದ್ದಾರೆ’ ಎಂದು ಭರತ್ ಹೇಳಿದ್ದಾರೆ.
ಎಪ್ಪತ್ತು ದಿನಗಳಲ್ಲಿ ಚೆನ್ನೈ ಹಾಗೂ ಲಂಡನ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆ್ಯಮಿ ಜಾಕ್ಸನ್ ಸಣ್ಣದೊಂದು ಅಂತರದ ಬಳಿಕ ಈ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ, ಸಂದೀಪ್ ಕೆ. ವಿಜಯ್ ಛಾಯಾಗ್ರಹಣ ಸಿನಿಮಾಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.