ADVERTISEMENT

ಐದು ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಮರಳಿದ ನಟಿ ಭಾವನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2022, 9:02 IST
Last Updated 16 ಮಾರ್ಚ್ 2022, 9:02 IST
ನಟಿ ಭಾವನಾ (ಐಎಎನ್‌ಎಸ್ ಚಿತ್ರ)
ನಟಿ ಭಾವನಾ (ಐಎಎನ್‌ಎಸ್ ಚಿತ್ರ)   

ಬೆಂಗಳೂರು: 2017ರ ಕರಾಳ ಘಟನೆಯ ಬಳಿಕ ಮಲಯಾಳಂ ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಭಾವನಾ, ಐದು ವರ್ಷಗಳ ಬಳಿಕ ಪುನರಾಗಮನ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ.

ಈ ಕುರಿತು ಸ್ವತಃ ನಟಿ ಭಾವನಾ ಘೋಷಣೆ ಮಾಡಿದ್ದಾರೆ. ತಾವು ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

'ಎಂಟೆಇಕ್ಕಾಕ್ಕಕ್ಕೊರು ಪ್ರೇಮಡಾರ್ನ್' ಚಿತ್ರಕ್ಕೆ ನಟಿ ಭಾವನಾ ಬಣ್ಣ ಹಚ್ಚಲಿದ್ದಾರೆ.

ADVERTISEMENT

ಆದಿಲ್ ಮೈಮೂನತ್ ನಿರ್ದೇಶನದ ಚಿತ್ರವನ್ನು ರೆನಿಷ್ ಅಬ್ದುಲ್ ಖಾದರ್ ನಿರ್ಮಿಸುತ್ತಿದ್ದಾರೆ. ನಟ ಶರಫುದ್ದೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸೇರಿದಂತೆ ಪ್ರಮುಖ ನಟ-ನಟಿಯರು ಚಿತ್ರದ ಪೋಸ್ಟರ್ ಹಂಚುವ ಮೂಲಕ ಭಾವನಾಳಿಗೆ ಶುಭಾಶಯ ಕೋರಿದ್ದಾರೆ.

ನಟಿ ಭಾವನಾ 'ಜಾಕಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.