‘ಸಲಗ’ ಚಿತ್ರದ ಯಶಸ್ಸಿನ ಬಳಿಕ ‘ದುನಿಯಾ’ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ‘ಭೀಮ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ.
‘ಈ ಚಿತ್ರವು ನೈಜತೆಯಿಂದ ಕೂಡಿದೆ. ಊರ್ವಶಿ ಚಿತ್ರಮಂದಿರದ ಸುತ್ತಮುತ್ತ ಮಧ್ಯರಾತ್ರಿ ವೇಳೆ ಚಿತ್ರದ ಕೊನೆಯ ಭಾಗವನ್ನು ಚಿತ್ರೀಕರಿಸಲಾಗಿದೆ. ನಾಯಕ ಪೊಲೀಸರಿಂದ ಬಂಧನಗೊಳ್ಳುವ ಕ್ಲೈಮ್ಯಾಕ್ಸ್ ಭಾಗವನ್ನು ಇಲ್ಲಿ ಚಿತ್ರಿಕರಿಸಿದ್ದೇವೆ’ ಎಂದರು ವಿಜಯ್.
ನಿರ್ದೇಶಕ ವಿಜಯ್ ಇದೇ ವೇಳೆ ಕಾಲ್ನಡಿಗೆಯಲ್ಲಿ ಮಾಧ್ಯಮದವರಿಗೆ ಭೀಮನ ಚಟುವಟಿಕೆಗಳು ನಡೆಯುವ ಪ್ರದೇಶವನ್ನು ಪರಿಚಯಿಸಿಕೊಟ್ಟರು. ‘ನನ್ನ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸುವುದು ಖಚಿತ. ಆದರೆ ನೀವು ನಿರೀಕ್ಷಿಸಿದಂತೆ ಕಿರಿ ಮಗಳು ಮೋನಿಷಾ ಸದ್ಯ ಚಿತ್ರರಂಗಕ್ಕೆ ಬರುತ್ತಿಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅವಳು ಇತ್ತೀಚೆಗಷ್ಟೆ ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ನಟನೆ ತರಬೇತಿ ಮುಗಿಸಿ ಬಂದಿದ್ದಾಳೆ’ ಎಂದು ವಿಜಯ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.