ADVERTISEMENT

ಡೆಂಗಿ ಜ್ವರದಿಂದ ಬಳಲಿದ ನಟಿ ಭೂಮಿ ಪೆಡ್ನೇಕರ್: ಸೊಳ್ಳೆಗಳಿಂದ ದೂರ ಇರಿ ಎಂದು ಮನವಿ

ಲಸ್ಟ್ ಸ್ಟೋರಿಸ್ ಖ್ಯಾತಿಯ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಡೆಂಗಿ ಜ್ವರಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಪಿಟಿಐ
Published 22 ನವೆಂಬರ್ 2023, 15:54 IST
Last Updated 22 ನವೆಂಬರ್ 2023, 15:54 IST
<div class="paragraphs"><p>ಭೂಮಿ ಪೆಡ್ನೇಕರ್</p></div>

ಭೂಮಿ ಪೆಡ್ನೇಕರ್

   

ಬೆಂಗಳೂರು: ಲಸ್ಟ್ ಸ್ಟೋರಿಸ್ ಖ್ಯಾತಿಯ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಡೆಂಗಿ ಜ್ವರದಿಂದ ಬಳಲಿ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಚಿತ್ರ ಹಂಚಿಕೊಂಡು, ‘ಡೆಂಗಿ ಜ್ವರದಿಂದ ಹುಶಾರಾಗಿರಿ, ನಾನಂತು 8 ದಿನ ತುಂಬಾ ಕಷ್ಟ ಅನುಭವಿಸಿದೆ’ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ADVERTISEMENT

‘ಕಳೆದ ಕೆಲವು ದಿನಗಳು ನನ್ನ ಕುಟುಂಬಕ್ಕೆ ಮತ್ತು ನನಗೆ ತುಂಬಾ ಕಷ್ಟಕರವಾಗಿತ್ತು. ಸೊಳ್ಳೆಗಳಿಂದ ದೂರ ಇರುವುದು ಅತ್ಯಗತ್ಯವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಹೆಚ್ಚಿನ ಮಾಲಿನ್ಯ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತಿದೆ. ನನಗೆ ತಿಳಿದಿರುವ ಕೆಲವು ಜನರು ಇತ್ತೀಚೆಗೆ ಡೆಂಗಿಗೆ ಒಳಗಾಗಿದ್ದಾರೆ. ಜಾಗರೂಕರಾಗಿರಿ‘ ಎಂದು ಭೂಮಿ ಪೆಡ್ನೇಕರ್ ಬರೆದುಕೊಂಡಿದ್ದಾರೆ.

ಐದು ವರ್ಷದ ಹಿಂದೆ ‘ಧಮ್ ಲಗಾ ಕೇ ಐಸಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳ ಪ್ರವೇಶಿಸಿದ ನಟಿ ಭೂಮಿ ಪೆಡ್ನೇಕರ್ ಹಲವು ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ‘ಭಕ್ಷಕ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.