ಮುಂಬೈ: ಹಿಂದಿ ‘ಬಿಗ್ಬಾಸ್ ಸೀಸನ್ 14 ಮತ್ತು ‘ಖತ್ರೋನ್ ಕೆ ಕಿಲಾಡಿ‘ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನಿಕ್ಕಿ ತಾಂಬೋಲಿ ಅವರು ‘ಪಪ್ಪಿ ಲವ್ ‘ ಚಿತ್ರದ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಸಿನಿಮಾದಲ್ಲಿ ನಟಿ ನಿಕ್ಕಿ ತಾಂಬೋಲಿ ಅವರು ಪಂಜಾಬಿ ಎನ್ಆರ್ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಟಿ ನಿಕ್ಕಿ ‘ಪಪ್ಪಿ ಲವ್‘ ಚಿತ್ರಕ್ಕಾಗಿ ತುಂಬಾ ಉತ್ಸುಕಳಾಗಿದ್ದೇನೆ. ಈ ಚಿತ್ರದ ಮೂಲಕ ಒಟಿಟಿ ಹಾಗೂ ಎನ್ಆರ್ಐ ಪಾತ್ರ ಎರಡರಲ್ಲೂ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತೀದ್ದೇನೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ತುಂಬಾ ಕತುರಳಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಚಿತ್ರದ ಪಾತ್ರಕ್ಕಾಗಿ ನಾನು ಸಾಕಷ್ಟು ಶ್ರಮವಹಿಸಿದ್ದೇನೆ ಎಂದಿದ್ದಾರೆ.
‘ಪಪ್ಪಿ ಲವ್‘ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡಿದ್ದು, ನಟ ತನುಜ್ ವಿರ್ವಾನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.