ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ದೊಡ್ಡ ಮನೆಯಲ್ಲಿ 16 ಸ್ಪರ್ಧಿಗಳಿದ್ದು,ವಿವಿಧ ಟಾಸ್ಕ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಸ್ಟಾರ್ ಎಂದೇ ಕರೆಯುವ ಸೋನು ಶ್ರೀನಿವಾಸ್‌ಗೌಡ ಅವರು ದೊಡ್ಡ ಮನೆಯಲ್ಲಿ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಟಿಕ್ ಟಾಕ್ ಮತ್ತು ರೀಲ್ಸ್ ವಿಡಿಯೊಗಳ ಮೂಲಕ ಗಮನ ಸೆಳೆದಿದ್ದ ಸೋನು ಅವರ ಖಾಸಗಿ ವಿಡಿಯೊ ಈ ಹಿಂದೆಲೀಕ್ ಆಗಿತ್ತು. ಅದರ ಬಗ್ಗೆ ದೊಡ್ಡ ಮನೆಯಲ್ಲಿ ಮಾತನಾಡಿದ್ದಾರೆ.
ನನ್ನ ಪರಿಚಯದ ವ್ಯಕ್ತಿ ಜೊತೆ ನಾನು 3 ವರ್ಷ ಇದ್ದೆ. ಅವನುಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋದ. ಈ ವೇಳೆ ಅವನು ಮತ್ತು ನಾನು ವಿಡಿಯೊ ಕಾಲ್ ಮಾಡುತ್ತಿದ್ದೇವು. ನನ್ನ ಖಾಸಗಿ ವಿಡಿಯೊವನ್ನು ಅವನು ಲೀಕ್ ಮಾಡಿದ್ದ.ವಿಡಿಯೊ ಬಿಡುಗಡೆ ಮಾಡಿ ನನ್ನ ಬ್ಲ್ಯಾಕ್ ಮೇಲ್ ಮಾಡಿದ್ದ. ಇನ್ನೊಂದು ವಿಡಿಯೊವನ್ನು ಯಾವಾಗ ಬಿಡುಗಡೆ ಮಾಡುತ್ತಾನೊ ಗೊತ್ತಿಲ್ಲ ಎಂದು ಸೋನು ಹೇಳಿದ್ದಾರೆ.
ಆ ವಿಡಿಯೊ ಬಿಡುಗಡೆಯಾದಗಿನಿಂದ ನಾನು ಅಪ್ಪನ ಮನೆಗೆ ಹೋಗಿಲ್ಲ. ಅವರಿಗೆ ನನ್ನ ಮುಖ ತೋರಿಸಲು ಆಗಿಲ್ಲ. ನಾನು ತಪ್ಪು ಮಾಡಿ ಬಿಟ್ಟೆ. ಮನೆಯ ಮಾನ ಮರ್ಯಾದೆ ತೆಗೆದು ಬಿಟ್ಟೆ. ನಮ್ಮ ಸಂಬಂಧಿಕರು ಕೂಡ ನನ್ನ ಸಿಕ್ಕಾಪಟ್ಟೆ ಬೈಯ್ದು ಬಿಟ್ಟರು. ಈ ಘಟನೆಯಿಂದಾಗಿ ನಾನು ಮನೆಗೆ ಹೋಗಿಲ್ಲ ಎಂದು ಸೋನು ಕಂಬನಿ ಮಿಡಿದಿದ್ದಾರೆ.
ಈ ರೀತಿ ಯಾವ ಹುಡುಗಿಗೂ ಆಗಬಾರದು, ಯಾವುದೇ ಸಮಸ್ಯೆಗಳು ಬರಲಿ, ಹುಡುಗಿಯರು ಧೈರ್ಯದಿಂದ ಇರಬೇಕುಎಂದು ಹೇಳಿದ್ದಾರೆ. ಅಲ್ಲದೇ ನಾನು ಟ್ರೋಲ್‌ಗಳಿಂದ ಬೆಳೆದಿಲ್ಲ ಎಂದಿರುವ ಅವರು ನನಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎಂದು ಸೋನು ಹೇಳಿದ್ದಾರೆ.
ದೊಡ್ಡ ಮನೆಯಲ್ಲಿ ಸೋನು ಗೌಡ ಯಾವ ರೀತಿ ಟಾಸ್ಕ್ ಮಾಡುತ್ತಾರೆ? ಹೇಗೆ ಇರುತ್ತಾರೆ?ಎಂಬುದನ್ನು ಕಾದು ನೋಡಬೇಕು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.