ADVERTISEMENT

ಮುಂಬೈ ಮೇಯರ್‌ ಅಭ್ಯರ್ಥಿಯಾಗಿ ಮಿಲಿಂದ್‌ ಸೋಮನ್‌, ಸೋನು ಸೂದ್‌ ಕಣಕ್ಕೆ?

ಕಾಂಗ್ರೆಸ್ ಕಾರ್ಯತಂತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2021, 6:08 IST
Last Updated 24 ಆಗಸ್ಟ್ 2021, 6:08 IST
ಮಿಲಿಂದ್‌ ಸೋಮನ್‌ ಮತ್ತು ಸೋನು ಸೂದ್
ಮಿಲಿಂದ್‌ ಸೋಮನ್‌ ಮತ್ತು ಸೋನು ಸೂದ್   

ಮುಂಬೈ: 2022ರ ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮುಂದಾಗಿರುವ ಕಾಂಗ್ರೆಸ್‌, ಮೇಯರ್‌ ಅಭ್ಯರ್ಥಿಯನ್ನು ಮುಂಚಿತವಾಗಿ ಘೋಷಣೆ ಮಾಡುವ ಪ್ರಯತ್ನದಲ್ಲಿದೆ.

ಹೌದು, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಪುತ್ರ ರಿತೀಶ್ ದೇಶಮುಖ್, ಮಾಡೆಲ್ ಮಿಲಿಂದ್‌ ಸೋಮನ್‌ ಮತ್ತು ನಟ ಸೋನು ಸೂದ್ ಅವರನ್ನು ಚುನಾವಣೆಗೆ ಸ್ಫರ್ಧಿಸುವಂತೆ ಮನವೊಲಿಸುವುದರ ಜತೆಗೆ, ಇವರಲ್ಲಿ ಒಬ್ಬರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಈ ಮೂವರು ಸೆಲೆಬ್ರಿಟಿಗಳು ಇದುವರೆಗೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ, ಇವರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ರಾಜಕೀಯಕ್ಕೆ ಬರುವುದಾದರೇ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಈಗಾಗಲೇ ಕಾಂಗ್ರೆಸ್‌ ಕಾರ್ಯದರ್ಶಿ ಗಣೇಶ್ ಯಾದವ್‌ ಅವರು 25 ಪುಟಗಳ ಕಾರ್ಯತಂತ್ರವನ್ನು ಸಿದ್ಧಪಡಿಸಿದ್ದು, ಇದಕ್ಕೆ ಹೈಕಮಾಂಡ್‌ ಇನ್ನಷ್ಟೆ ಒಪ್ಪಿಗೆ ನೀಡಬೇಕಿದೆ.

ಮುಂಬೈನ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗ್ತಾಪ್ ಅವರು ಪಕ್ಷದ ಹೈಕಮಾಂಡ್‌ ಜತೆಗೆ ಕಾರ್ಯತಂತ್ರ ಕುರಿತು ಚರ್ಚಿಸಲಿದ್ದಾರೆ ಎಂದು ಯಾದವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.