ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ‘ಪೃಥ್ವಿರಾಜ್‘ ಜೂನ್ 3ರಂದು ತೆರೆಕಾಣಲು ಸಜ್ಜಾಗಿದೆ.
ರಾಜ ಪೃಥ್ವಿರಾಜ ಚೌಹಾಣ್ ಅವರ ಜೀವನ ಚರಿತ್ರೆ ಕುರಿತ ಐತಿಹಾಸಿಕ ಸಿನಿಮಾ ಇದಾಗಿದೆ.
ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಬಳಸಲು 50,000ಕ್ಕೂ ಅಧಿಕ ಕಾಸ್ಟೂಮ್ ಸಿದ್ಧಪಡಿಸಲಾಗಿತ್ತು ಎಂದು ಚಿತ್ರತಂಡ ಹೇಳಿದೆ. ಜತೆಗೆ 500 ವಿವಿಧ ಟರ್ಬನ್‌ಗಳನ್ನು ಕೂಡ ಬಳಸಲಾಗಿದೆ ಎಂದು ತಿಳಿದುಬಂದಿದೆ.
ಸಿನಿಮಾವೊಂದು ಅತ್ಯಂತ ನೈಜವಾಗಿ ಮತ್ತು ಆಕರ್ಷಕವಾಗಿ ಮೂಡಿಬರಲು ಅಗತ್ಯವಿರುವ ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ರಾಜ ಪೃಥ್ವಿರಾಜ ಅವರ ಐತಿಹಾಸಿಕ ಜೀವನ ಚರಿತ್ರೆ ಮತ್ತು ಅಂದಿನ ವೈಭವವನ್ನು ಜನರಿಗೆ ಚಿತ್ರದ ಮೂಲಕ ಪರಿಚಯಿಸುವ ಉದ್ದೇಶವಿದೆ, ಅದಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆ ಅದೇ ವೈಭವವನ್ನು ತೆರೆಯ ಮೇಲೆ ಮೂಡಿಸಲು ಎಲ್ಲ ಸವಲತ್ತು ಒದಗಿಸಿದೆ ಎಂದು ಅಕ್ಷಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.