ADVERTISEMENT

ರಿಷಿ ಕಪೂರ್‌ ಪುಣ್ಯಸ್ಮರಣೆ: ಅಪ್ಪನ ಜೊತೆಗಿನ ಬಾಲ್ಯದ ಚಿತ್ರ ಹಂಚಿಕೊಂಡ ರಿದ್ಧಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2022, 8:56 IST
Last Updated 30 ಏಪ್ರಿಲ್ 2022, 8:56 IST
ರಿಷಿ ಕಪೂರ್‌
ರಿಷಿ ಕಪೂರ್‌   

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅವರ ಸಹೋದರಿ ರಿದ್ಧಿಮಾ ಕಪೂರ್‌ ಅವರು ತಮ್ಮ ತಂದೆ ರಿಷಿ ಕಪೂರ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪನೊಂದಿಗಿನ ಬಾಲ್ಯದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ನೆನಪಿನಂಗಳಕ್ಕೆ ಜಾರಿದ್ದಾರೆ.

ಇಂದುರಿಷಿ ಕಪೂರ್‌ ಅವರ ಎರಡನೇ ವರ್ಷದ ಪುಣ್ಯಸ್ಮರಣೆ. ಅವರು ಅನಾರೋಗ್ಯದಿಂದಾಗಿ 2020ರ ಏಪ್ರಿಲ್‌ 30ರಂದು ನಿಧನರಾದರು.

ರಿದ್ಧಿಮಾ ಅವರು ಮಗುವಾಗಿದ್ದಾಗ, ಅವರನ್ನು ರಿಷಿ ಕಪೂರ್‌ ತಮ್ಮಹೆಗಲ ಮೇಲೆ ಎತ್ತಿಕೊಂಡಿರುವುದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೆಯಾಗಿರುವ ಚಿತ್ರದಲ್ಲಿದೆ. ಈ ಚಿತ್ರದ ಜೊತೆಗೆ ರಿದ್ಧಿಮಾ, 'ಪಾಪ' ಎಂದು ಬರೆದುಕೊಂಡಿದ್ದಾರೆ.

ADVERTISEMENT

ನಟ ರಣಬೀರ್‌ ಕಪೂರ್‌ ಅವರು ಇದೇ ತಿಂಗಳು (ಏ.14) ನಟಿ ಅಲಿಯಾ ಭಟ್‌ ಅವರನ್ನು ವಿವಾಹವಾದರು. ಮದುವೆ ನಂತರವೂ ಕುಟುಂಬದ ಚಿತ್ರವನ್ನು ಹಂಚಿಕೊಂಡಿದ್ದ ರಿದ್ಧಿಮಾ, ಅಪನನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.