ಬೆಂಗಳೂರು: ಬಾಲಿವುಡ್ ನಟಿ ಹಾಗೂ ಮಾಡೆಲ್ ನೇಹಾ ಶರ್ಮಾ ಅವರು ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಬಿಹಾರದ ಬಾಗಲ್ಪುರ್ (Bhagalpur Lok Sabha constituency) ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಮೇಲೆ ಒತ್ತಡವಿದೆ.
ನೇಹಾ ಶರ್ಮಾ ಅವರ ತಂದೆ ಬಿಹಾರದ ಕಾಂಗ್ರೆಸ್ ನಾಯಕ ಹಾಗೂ ಬಾಗಲ್ಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಿತ್ ಶರ್ಮಾ ಅವರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಒತ್ತಡವಿದೆ.
ಆದರೆ ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿರುವ ಅವರು, ನಾನು ಈಗಾಗಲೇ ಶಾಸಕನಿದ್ದೇನೆ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ನನ್ನ ಮಗಳು ನೇಹಾ ಸ್ಪರ್ಧಿಸಲಿದ್ದಾಳೆ ಎಂದು ತಿಳಿಸಿದ್ದಾರೆ.
ಸದ್ಯ ಬಾಗಲ್ಪುರ್ ಲೋಕಸಭಾ ಕ್ಷೇತ್ರ ಜೆಡಿಯು ವಶದಲ್ಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಆರ್‌ಜೆಡಿ ಕೂಡ ಈ ಕ್ಷೇತ್ರ ತಮಗೆ ಬೇಕು ಎಂದು ಕೇಳುತ್ತಿದೆ. ಆದರೆ, ಅಜಿತ್ ಶರ್ಮಾ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬಿಹಾರದ ಕೆಲವು ಸ್ಥಾನಗಳಿಗೆ ಇಂಡಿಯಾ ಮೈತ್ರಿಕೂಟ ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಮೂರ್ನಾಲ್ಕು ದಿನದಲ್ಲಿ ಟಿಕೆಟ್ ಅಂತಿಮಗೊಳ್ಳುತ್ತವೆ ಎಂದು ಅಜಿತ್ ಶರ್ಮಾ ತಿಳಿಸಿದ್ದಾರೆ.
ಆದರೆ ರಾಜಕೀಯಕ್ಕೆ ಧುಮುಕುವ ಬಗ್ಗೆ ನೇಹಾ ಶರ್ಮಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2007ರಲ್ಲಿ ರಾಮಚರಣ್ ಅವರ ತೆಲುಗು ಚಿತ್ರ ಚಿರುತ ಮೂಲಕ ಚಿತ್ರರಂಗ ಪ್ರವೇಶಿಸಿದ ನೇಹಾ, ಕ್ರೂಕ್, ತಾನಾಜಿ ಸೇರಿದಂತೆ ಅನೇಕ ಚಿತ್ರಗಳಲ್ಲಿ, ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಮಾಡೆಲ್ ಆಗಿಯೂ ಅವರು ಜನಪ್ರಿಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.