ADVERTISEMENT

ಇಸ್ರೇಲ್‌ನಲ್ಲಿ ಕಂಡ ಯುದ್ಧದ ಭೀಕರತೆಯನ್ನು ಹಂಚಿಕೊಂಡ ನಟಿ ನುಶ್ರತ್‌ ಭರುಚಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2023, 14:29 IST
Last Updated 10 ಅಕ್ಟೋಬರ್ 2023, 14:29 IST
<div class="paragraphs"><p>ನುಶ್ರತ್‌ ಭರುಚಾ</p></div>

ನುಶ್ರತ್‌ ಭರುಚಾ

   

ಚಿತ್ರ:Insta/nushrrattbharuccha

ಮುಂಬೈ: ಯುದ್ಧ ಭೂಮಿ ಇಸ್ರೇಲ್‌ನಿಂದ ಸುರಕ್ಷಿತವಾಗಿ ವಾಪಸ್ಸಾದ ಬಳಿಕ ಬಾಲಿವುಡ್‌ ನಟಿ ನುಶ್ರತ್‌ ಭರುಚಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭರುಚಾ ಅವರು ಹೈಫಾ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದರು.

ADVERTISEMENT

‘ಬೆಳಿಗ್ಗೆ ಏಳುವಷ್ಟರಲ್ಲಿ ಕಿವಿ ಕಿವುಡಾಗುವಷ್ಟು ಜೋರಾಗಿ ಬಾಂಬ್‌ ಸ್ಫೋಟಗೊಳ್ಳುವ ಶಬ್ದ ಕೇಳಿಸುತ್ತಿತ್ತು. ಶನಿವಾರವೇ ಭಾರತಕ್ಕೆ ವಾಪಸ್ಸಾಗಬೇಕೆಂದು ಯೋಚಿಸಿದ್ದೆವು. ಆದರೆ ಶನಿವಾರ ಬೆಳಿಗ್ಗೆ ಆಗುವಷ್ಟರಲ್ಲಿ ನಗರದ ಚಿತ್ರಣವೇ ಬದಲಾಗಿತ್ತು. ಎಲ್ಲೆಂದರಲ್ಲಿ ಬಾಂಬ್‌ ಸ್ಫೋಟ, ಸೈರನ್‌ಗಳ ಸದ್ದು ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಹೊಟೇಲ್‌ನಲ್ಲಿದ್ದವರನ್ನೆಲ್ಲ ಆಶ್ರಯ ಶಿಬಿರಕ್ಕೆ ತೆರಳುವಂತೆ ಹೇಳಲಾಗಿತ್ತು’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

’ಬಹಳಷ್ಟು ಸಮಯ ಶೆಲ್ಟರ್‌ನಡಿಯಲ್ಲಿಯೇ ಇದ್ದೆವು. ಆಗ ಇಸ್ರೇಲ್‌ ಮೇಲೆ ದಾಳಿಯಾಗಿರುವುದು ಅರಿವಿಗೆ ಬಂತು. ಯಾವುದಕ್ಕೂ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲಿಲ್ಲ.

ಟೆಲ್‌ ಅವೀವ್‌ನಲ್ಲಿ ನಾವಿದ್ದ ಹೊಟೇಲ್‌ನಿಂದ ಭಾರತೀಯ ರಾಯಭಾರ ಕಚೇರಿ ಕೇವಲ 2 ಕಿಮೀ ದೂರದಲ್ಲಿತ್ತು. ಅಲ್ಲಿಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ

ಹೊಟೇಲ್‌ನಿಂದ ಬೆನ್‌ ಗುರಿಯನ್ ವಿಮಾನ ನಿಲ್ದಾಣಕ್ಕೆ ಬರುವುದು ಅಷ್ಟು ಸುಲಭವಾಗಿರಲ್ಲ. ವಾಹನಗಳ ಮೇಲೆ ಕಣ್ಣೆದುರೇ ದಾಳಿಯಾಗುತ್ತಿತ್ತು. ಕೊನೆಗೂ ಭಯದಲ್ಲಿಯೇ ವಿಮಾನ ನಿಲ್ದಾಣಕ್ಕೆ ತಲುಪಿದ್ದೆವು. ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದೆವು. ಅಲ್ಲಿಯ ವಾತಾವರಣ ನಿಜಕ್ಕೂ ಭಯ ಹುಟ್ಟಿಸುವಂತಿತ್ತು’ ಎಂದು ತಾವು ಕಂಡ ಇಸ್ರೇಲ್‌ ಯುದ್ಧದ ಚಿತ್ರಣವನ್ನು ಭರುಚಾ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.