ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಅವರು ಇಂದು (ಮಂಗಳವಾರ) 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೇರಿದಂತೆ ಗಣ್ಯರು ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ.
ರವೀನಾ ಟಂಡನ್ 1974ರ ಅಕ್ಟೋಬರ್ 26ರಂದು ಮುಂಬೈನಲ್ಲಿ ಜನಿಸಿದರು. 1991ರಲ್ಲಿ ತೆರೆಕಂಡಿದ್ದ ‘ಪತ್ತರ್ ಕೆ ಫೂಲ್' ಚಿತ್ರದಲ್ಲಿ ರವೀನಾ ಚಿತ್ರರಂಗಕ್ಕೆ ಪದಾಪರ್ಣೆ ಮಾಡಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ರವೀನಾ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
90ರ ದಶಕದಲ್ಲಿ ಬಾಲಿವುಡ್ನಲ್ಲಿ ರವೀನಾ ಟಂಡನ್, ‘ಮೊಹ್ರಾ’, ‘ದಿಲ್ವಾಲೆ’, ‘ಲಾಡ್ಲಾ’, ‘ಅಂದಾಜ್ ಅಪ್ನ ಅಪ್ನ’ ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದರು.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ನಟ ಯಶ್ ಅಭಿನಯದ ‘ಕೆಜಿಎಫ್ –2’ ಚಿತ್ರದಲ್ಲಿ ಅಭಿನಯಿಸಿರುವ ರವೀನಾ ಟಂಡನ್, ‘ರಮಿಕಾ ಸೇನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.