ಬೆಂಗಳೂರು: ನಾನು ಮದುವೆಯಾಗಿರುವುದು ಕಾಶ್ಮೀರಿ ಪಂಡಿತ್ ಕುಟುಂಬದವರನ್ನು.. ಹೀಗಾಗಿ ಅವರು ಅನುಭವಿಸಿದ ನೋವು ನನಗೆ ಚೆನ್ನಾಗಿ ಗೊತ್ತಿದೆ. ಅಂದು ಏನಾಯಿತು ಎನ್ನುವ ಬಗ್ಗೆ ತಿಳಿದುಕೊಳ್ಳಲು, ದಯವಿಟ್ಟು ಎಲ್ಲರೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿ ಎಂದು ನಟಿ ಯಾಮಿ ಗೌತಮ್ ಹೇಳಿದ್ದಾರೆ.
ಯಾಮಿ ಗೌತಮ್ ಮತ್ತು ಅವರ ಪತಿ ಆದಿತ್ಯ ಧಾರ್, 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಅಭಿನಂದಿಸಿದ್ದಾರೆ.
32 ವರ್ಷಗಳ ಬಳಿಕವಾದರೂ, ಕೊನೆಗೂ ಸತ್ಯವನ್ನು ಹೀಗೆ ಬಹಿರಂಗಪಡಿಸಲಾಯಿತು. ಕಾಶ್ಮೀರಿ ಪಂಡಿತರ ಕುಟುಂಬ ಅನುಭವಿಸಿದ ನೋವು, ದೌರ್ಜನ್ಯದ ಬಗ್ಗೆ ನಮಗೆ ತಿಳಿದಿರಬೇಕು ಎಂದು ಯಾಮಿ ಟ್ವೀಟ್ ಮಾಡಿದ್ದಾರೆ.
ಯಾಮಿ ಅವರ ಪತಿ ಆದಿತ್ಯ, ಕಾಶ್ಮೀರಿ ಪಂಡಿತರ ಕುಟುಂಬದವರಾಗಿದ್ದು, ಸಿನಿಮಾ ಕುರಿತು ಪ್ರಶಂಸೆಯ ಟ್ವೀಟ್ ಮಾಡಿದ್ದರು.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಕುರಿತು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.