ಅಮ್ಮಂದಿರ ದಿನದಂದು (ಮೇ 10) ಬಾಲಿವುಡ್ ಮಂದಿ ಭಾವನಾತ್ಮಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಈ ಮಿತಿಯಲ್ಲೇ ತಮ್ಮ ತಾಯಿ; ಮಕ್ಕಳೊಂದಿಗೆ ಕಳೆದ ಕ್ಷಣಗಳ ಫೋಟೊ, ವಿಡಿಯೊಗಳನ್ನು ಹಂಚಿಕೊಂಡು ತಾಯ್ತನಕ್ಕೆ ಸಲಾಂ ಎಂದಿದ್ದಾರೆ.
‘ನನ್ನ ಹೃದಯದ ಎರಡು ಭಾಗಗಳು’ ಎಂದು ತಮ್ಮ ಮಕ್ಕಳ ಪುಟ್ಟ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿಹಾಕಿಕೊಂಡಿದ್ದಾರೆ ನಟಿ ಶಿಲ್ಪಾಶೆಟ್ಟಿ. ಕುಂದ್ರಾ ಕುಟುಂಬಕ್ಕೆ ಈ ವರ್ಷ ಜತೆಯಾದ ಮಗಳು ಶಮಿಶಾ ಜೊತೆ ಇರುವ ಫೋಟೊ ಹಾಗೂ ಮಗ ವಿಹಾನ್ ತಮಗೆ ಬರೆದಿರುವ ಪತ್ರವನ್ನು ಹಂಚಿಕೊಂಡಿದ್ದಾರೆ.
ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಆ ತಾಯಿಗೆ ನಮಿಸುವುದಷ್ಟೆ ನಮ್ಮ ಭಾಗ್ಯ. ನಟಿಸಾರಾ ಅಲಿ ಖಾನ್ ‘ನನ್ನ ಸೃಷ್ಟಿಗೆ ಕಾರಣರಾದ ನಿಮಗೆ ಶರಣು’ ಎಂದಿದ್ದಾರೆ . ಅಜ್ಜಿ, ಅಮ್ಮ ಜೊತೆ ಇರುವ ತಮ್ಮ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿಹಂಚಿಕೊಂಡಿದ್ದಾರೆ.
ಕರೀಷ್ಮಾ ಕಪೂರ್ ಹ್ಯಾಪಿ ‘ಮೆಂಟಲ್‌ವುಡ್’ ಎಂದು ಬರೆದುಕೊಂಡಿದ್ದಾರೆ. ‘ನಿಮ್ಮ ತಾಯಿಯನ್ನು ಗೌರವಿಸಿ, ಅವರ ಹೊಣೆಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ. ಎಲ್ಲ ಮೆಂಟಲ್ ಅಮ್ಮಂದಿರಿಗೆ ಶುಭಾಶಯ’ ಎಂದು ಬರೆದುಕೊಂದಿದ್ದಾರೆ. ದಿಟ್ಟ ಅಮ್ಮಂದಿರಿಗೆ ಶುಭಾಶಯ ಕೋರಿರುವ ನಟಿ ಕಲ್ಕಿ, ‘ಎಲ್ಲಾ ದಿಟ್ಟ ಮಮ್ಮ ಬೇರ್’ಗಳಿಗೆ ಅಮ್ಮಂದಿರ ದಿನದ ಶುಭಾಶಯ ಎಂದು ಬರೆದಿದ್ದಾರೆ. ತಮ್ಮ ಮಗಳೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ನಟಿ ಕರೀನಾ ಕಪೂರ್ ಖಾನ್ ಹಾಗೂ ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೆಟ್ಟರ್ ಆಗಿರುವ ಅಮ್ಮ– ಮಗ ಜೋಡಿ. ತಮ್ಮ ತುಂಟ ಮಗನೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ ಕರೀನಾ. ‘ಹೆಚ್ಚೇನು ಹೇಳುವುದಿಲ್ಲ, ಈ ಫೋಟೊವೇ ಎಲ್ಲ ಹೇಳುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಕೆಲವರು ತಮ್ಮ ಮಕ್ಕಳು ಹಾಗೂ ತಮ್ಮ ತಾಯ್ತನದ ಬಗ್ಗೆ ಗೇಲಿ ಮಾಡಿಕೊಂಡರೆ. ಇನ್ನು ಕೆಲವರು ಭಾವನಾತ್ಮಕವಾಗಿ ಅಮ್ಮಂದಿರ ದಿನ ಬಗ್ಗೆ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.