ADVERTISEMENT

Pathaan Row: ಶಾರುಖ್‌ರನ್ನು ಜೀವಂತವಾಗಿ ಸುಟ್ಟುಹಾಕುತ್ತೇನೆ: ಅಯೋಧ್ಯೆ ಸ್ವಾಮೀಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 7:00 IST
Last Updated 21 ಡಿಸೆಂಬರ್ 2022, 7:00 IST
   

ನವದೆಹಲಿ: ಬಾಲಿವುಡ್‌ ನಟ ಶಾರುಖ್ ಖಾನ್ –ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರವೀಗ ವಿವಾದದ ಕೇಂದ್ರಬಿಂದುವಾಗಿದೆ.

ಚಿತ್ರದ ‘ಬೇಷರಮ್‌ ರಂಗ್‌’ ಹಾಡಿನಲ್ಲಿ ಕೇಸರಿ ಬಟ್ಟೆ ಬಳಸಿ ದೀಪಿಕಾ ಪಡುಕೋಣೆ ಅವರನ್ನು ಹಾಟ್‌ ಆಗಿ ತೋರಿಸಿ, ಕೇಸರಿ ಬಣ್ಣದ ಹಿಂದಿರುವ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಒಂದು ಬಣದವರು ಆರೋಪವೆತ್ತಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇದೀಗ ವಿವಾದಕ್ಕೆ ಸಂಬಂಧಿಸಿ ಅಯೋಧ್ಯೆಯ ಜಗದ್ಗುರು ಪರಮಹಂಸ ಆಚಾರ್ಯರು ಪ್ರತಿಕ್ರಿಯಿಸಿದ್ದು, ‘ಶಾರುಖ್ ಖಾನ್ ಅವರನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ.

ADVERTISEMENT

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಶಾರುಖ್‌ನನ್ನು ಜೀವಂತವಾಗಿ ಸುಟ್ಟು ಹಾಕಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಸಿದ್ಧನಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕು. ಒಂದು ವೇಳೆ ಚಿತ್ರ ಪ್ರದರ್ಶಿಸಿದರೆ, ಆ ಚಿತ್ರಮಂದಿರವನ್ನು ಸುಟ್ಟುಹಾಕಲಾಗುತ್ತದೆ ಎಂದು ಜಗದ್ಗುರು ಕಿಡಿಕಾರಿದ್ದಾರೆ.

‘ಪಠಾಣ್‌’ ಚಿತ್ರದಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ. ಅಂತಹ ಚಿತ್ರಗಳನ್ನು ಬಹಿಷ್ಕರಿಸಬೇಕು. ಶಾರುಖ್ ಖಾನ್, ಪ್ರವಾದಿ ಮಹಮ್ಮದ್‌ ವಿರುದ್ಧ ಯಾವುದೇ ವೆಬ್ ಸಿರೀಸ್ ಮಾಡಿಲ್ಲ. ಏಕೆಂದರೆ ಅವರಿಗೆ ಧೈರ್ಯವಿಲ್ಲ. ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಸನಾತನ ಧರ್ಮಕ್ಕೆ ಅಪಚಾರ ಮಾಡಿದರೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಆಚಾರ್ಯ ವಾಗ್ದಾಳಿ ನಡೆಸಿದ್ದಾರೆ.

‘ಪಠಾಣ್‌’ ಚಿತ್ರ 2023ರ ಜ.25ರಂದು ತೆರೆಗೆ ಬರಲಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.