ಮುಂಬೈ:ಬಾಲಿವುಡ್‌ನಲ್ಲಿ ಬಿಗ್‌ಬಜೆಟ್ ಸಿನಿಮಾಗಳಿಗೆ ಬಾಯ್ಕಾಟ್ ಸಂಕಷ್ಟ ಎದುರಾಗಿದ್ದು, ಇದರಿಂದ ಅಮೀರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾಗೆ ಬಿಸಿ ತಾಗಿದೆ.
ಅಮೀರ್ ಖಾನ್ ಸಿನಿಮಾಗಳಿಗೆ ಮಾತ್ರ ಕಾಡುತ್ತಿದ್ದ ಬಾಯ್ಕಾಟ್ ಸಮಸ್ಯೆ ಇದೀಗ ಬಾಲಿವುಡ್‌ನ ಇತರೆ ಸಿನಿಮಾಗಳಿಗೂ ವ್ಯಾಪಿಸಿರುವುದು ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಯುವ ಸಿನಿಮಾ ವಿಮರ್ಶಕ, ವಿಡಿಯೊ ಜಾಕಿ ಕೌಶಿಕ್ ನಿಧನ
ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ‘ ಸಿನಿಮಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಬಾಯ್ಕಾಟ್ ಸಮಸ್ಯೆ ಎದುರಾಗಿತ್ತು. ಆಗಸ್ಟ್ 11ರಂದುಸಿನಿಮಾ ಬಿಡುಗಡೆಯಾಗಿ ಸಾಧಾರಣ ಮಟ್ಟದಲ್ಲಿ ಗಳಿಕೆ ದಾಖಲಿಸಿದೆ. ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎಂದು ವಿತರಕರು ಹೇಳುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ಕಾಟ್ ಬಿಸಿಯಿಂದಾಗಿ ಈ ಸಿನಿಮಾ ಸೋಲು ಕಂಡಿದೆ ಎಂದು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಲಾಲ್ ಸಿಂಗ್ ಚಡ್ಡಾ‘ ಸಿನಿಮಾ ನೋಡುವಂತೆ ನಟ ಅಕ್ಷಯ್ ಕುಮಾರ್ ಸಹ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಅವರ ಹೇಳಿಕೆಯಿಂದ ಅಕ್ಷಯ್ ಸಿನಿಮಾಗೂ ಬಾಯ್ಕಾಟ್ ಬಿಸಿ ತಟ್ಟಿತ್ತು.ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಸಂದರ್ಭದಲ್ಲೇ ಅಕ್ಷಯ್ ಅಭಿನಯದ ‘ರಕ್ಷ ಬಂಧನ್‘ ಚಿತ್ರ ಬಿಡುಗಡೆಯಾಗಿದೆ.
'ಲಾಲ್ ಸಿಂಗ್ ಚಡ್ಡಾ‘ ಸಿನಿಮಾ ನೋಡಿ ಎಂದು ಹೇಳಿದ್ದಕ್ಕೆ ಹಾಗೂ ಸಿನಿಮಾದಲ್ಲಿ ಕೆಲವು ಆಕ್ಷೇಪ ದೃಶ್ಯಗಳು ಇರುವುದರಿಂದಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಷಯ್ ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಅಭಿಯಾನ ಮಾಡಲಾಗಿತ್ತು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ನೆಲ ಕಚ್ಚಿದೆ.
ಇದೀಗ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್‌ಅಭಿನಯದ ಸಿನಿಮಾಗಳಿಗೂ ಬಾಯ್ಕಾಟ್ ಬಿಸಿ ತಟ್ಟುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಹೃತಿಕ್,'ಲಾಲ್ ಸಿಂಗ್ ಚಡ್ಡ' ಸಿನಿಮಾ ನೋಡಿ ಹೊಗಳಿದ್ದರು. ನಂತರ ಜನರಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.
ಹೃತಿಕ್ ಅವರ ಈ ನಡೆಯನ್ನು ವಿರೋಧಿಸಿ ಅವರ ಮುಂದಿನ ‘ವಿಕ್ರಂ-ವೇದ' ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಶುರುವಾಗಿದೆ. ಈ ಚಿತ್ರದಲ್ಲಿ ಸೈಫ್ ಆಲಿಖಾನ್ ನಟಿಸಿರುವುದುಬಾಯ್ಕಾಟ್ ಅಭಿಯಾನಕ್ಕೆ ಒಂದು ಕಾರಣ ಎನ್ನಲಾಗಿದೆ.
ಈ ಬೆನ್ನಲೇ ಶಾರುಖ್ ಅಭಿನಯದ'ಪಠಾಣ್' ಸಿನಿಮಾ ಬಾಯ್ಕಾಟ್ ಮಾಡಿ, ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಬೆಂಬಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.
ಬಾಲಿವುಡ್‌ನಲ್ಲಿ ಧಾರ್ಮಿಕ ಹಾಗೂ ಸೈದ್ಧಾಂತಿಕ ವಿಚಾರಗಳು ಸಿನಿಮಾ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವುದು ಉದ್ಯಮ ಬೆಳವಣಿಗೆಯ ಒಳ್ಳೆಯ ಲಕ್ಷಣಅಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.