ADVERTISEMENT

ಬೋನಿ ಕಪೂರ್, ಕುಟುಂಬಕ್ಕೆ ದುಬೈನ ಗೋಲ್ಡನ್ ವೀಸಾ

ಪಿಟಿಐ
Published 14 ಸೆಪ್ಟೆಂಬರ್ 2021, 11:26 IST
Last Updated 14 ಸೆಪ್ಟೆಂಬರ್ 2021, 11:26 IST
ಮಗಳು ಜಾಹ್ನವಿ ಜೊತೆ ಬೋನಿ ಕಪೂರ್
ಮಗಳು ಜಾಹ್ನವಿ ಜೊತೆ ಬೋನಿ ಕಪೂರ್   

ಮುಂಬೈ: ತಾವು ಮತ್ತು ತಮ್ಮ ಕುಟುಂಬಕ್ಕೆ 10 ವರ್ಷಗಳ ಅವಧಿಗೆ ದುಬೈನಪ್ರತಿಷ್ಠಿತ ಗೋಲ್ಡನ್ ವೀಸಾ ಸಿಕ್ಕಿರುವುದಾಗಿ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮಂಗಳವಾರ ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ 65 ವರ್ಷದ ನಿರ್ಮಾಪಕ ಬೋನಿ ಕಪೂರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ನನಗೆ ಮತ್ತು ನನ್ನ ಕುಟುಂಬಕ್ಕೆ 10 ವರ್ಷಗಳ ಗೋಲ್ಡನ್ ವೀಸಾ ನೀಡಿದ್ದಕ್ಕಾಗಿ ದುಬೈ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಅಲ್ಲಿ ಹೃದಯವಂತ ನಾಯಕತ್ವ ಇದೆ’ ಎಂದು ‘ಮಿಸ್ಟರ್ ಇಂಡಿಯಾ’, ‘ವಾಂಟೆಡ್‌’ನಂತಹ ಸೂಪರ್ ಹಿಟ್ ಚಿತ್ರಗಳು ಮತ್ತು ಮುಂಬರುವ ‘ಮೈದಾನ್’ ಚಿತ್ರದ ನಿರ್ಮಾಪಕ ಕಪೂರ್ ಟ್ವೀಟ್ ಮಾಡಿದ್ದಾರೆ.

ADVERTISEMENT

2019ರಿಂದ ದುಬೈನಲ್ಲಿ ಗೋಲ್ಡನ್ ವೀಸಾ ಪದ್ಧತಿ ಜಾರಿಗೆ ಬಂದಿದ್ದು, ಹೂಡಿಕೆದಾರರು (ಕನಿಷ್ಠ 10 ಮಿಲಿಯನ್ ಎಇಡಿ), ಉದ್ಯಮಿಗಳು, ವೃತ್ತಿಪರರು ಮತ್ತು ವಿಜ್ಞಾನ, ಜ್ಞಾನ ಮತ್ತು ಕ್ರೀಡಾ ಕ್ಷೇತ್ರದಂತಹ ವಿಶೇಷ ಪ್ರತಿಭೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಗೋಲ್ಡನ್ ವೀಸಾಗಳನ್ನು ಐದು ಅಥವಾ 10 ವರ್ಷಗಳ ಅವಧಿಗೆ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

ಈ ಹಿಂದೆ, ದುಬೈನಿಂದ ಗೋಲ್ಡನ್ ವೀಸಾ ಪಡೆದ ಸಿನಿ ತಾರೆಯರಲ್ಲಿ ಶಾರುಖ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಟೊವಿನೋ ಥಾಮಸ್ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.