ADVERTISEMENT

ಏಂಜೆಲಿನಾ ಜೋಲಿ ವಿರುದ್ಧ ಮೊಕದ್ದಮೆ ಹೂಡಿದ ಬ್ರಾಡ್‌ ಪಿಟ್‌: ಏನಿದು ವಿವಾದ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2022, 7:34 IST
Last Updated 19 ಫೆಬ್ರುವರಿ 2022, 7:34 IST
ಬ್ರಾಡ್ ಪಿಟ್ ಮತ್ತು ಏಂಜೆಲಿನಾ ಜೋಲಿ
ಬ್ರಾಡ್ ಪಿಟ್ ಮತ್ತು ಏಂಜೆಲಿನಾ ಜೋಲಿ    

ಲಾಸ್‌ ಏಂಜಲೀಸ್‌: ಆಸ್ತಿ ವಿವಾದಕ್ಕೆ ಸಂಬಂಧಿಸಿ ಹಾಲಿ­ವುಡ್‌ ತಾರಾ ದಂಪತಿ ಬ್ರಾಡ್ ಪಿಟ್ (58) ಮತ್ತು ಅವರ ವಿಚ್ಛೇದಿತ ಪತ್ನಿ ಏಂಜೆಲಿನಾ ಜೋಲಿ (46) ಅವರ ನಡುವೆ ಸಂಘರ್ಷ ಏರ್ಪಟ್ಟಿದೆ.

‘ನಾವು ಒಟ್ಟಿಗೆ ಇದ್ದಾಗ ಫ್ರಾನ್ಸ್‌ನಲ್ಲಿ ಖರೀದಿಸಿದ್ದ ಆಸ್ತಿಯನ್ನು ತಮ್ಮ ಗಮನಕ್ಕೆ ಬರದಂತೆ ಏಂಜೆಲಿನಾ ಜೋಲಿ ಮಾರಾಟ ಮಾಡಿದ್ದು, ಬಳಿಕ ರಷ್ಯಾ ಉದ್ಯಮಿಯೊಬ್ಬರೊಂದಿಗೆ ಮದುವೆಯಾಗಿದ್ದಾರೆ’ ಎಂದು ಬ್ರಾಡ್ ಪಿಟ್ ಆರೋಪಿಸಿದ್ದಾರೆ.

ಈ ಸಂಬಂಧ ಲಾಸ್‌ ಏಂಜಲೀಸ್‌ನಲ್ಲಿ ಏಂಜೆಲಿನಾ ವಿರುದ್ಧ ಮೊಕದ್ದಮೆ ದಾಖಲಿಸಿರುವ ಪಿಟ್‌, ‘ತಮ್ಮ ಒಪ್ಪಿಗೆ ಇಲ್ಲದೆ ಜೋಲಿ ಆಸ್ತಿ ಪಾಲನ್ನು ಮಾರಾಟ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

2008ರಲ್ಲಿ ಪಿಟ್‌ ದಂಪತಿ ಆಗ್ನೇಯ ಫ್ರಾನ್ಸ್‌ನ ಕೊರೆನ್ಸ್‌ನಲ್ಲಿ ಪ್ರದೇಶದಲ್ಲಿ ಆಸ್ತಿಯನ್ನು ಖರೀದಿಸಿದ್ದರು. ಬಳಿಕ ಈ ಜೋಡಿ 2014ರಲ್ಲಿ ಫ್ರಾನ್ಸ್‌­ನಲ್ಲಿ ರಹಸ್ಯವಾಗಿ ಮದುವೆ­­ಯಾಗಿ­ದ್ದರು.

2016ರಲ್ಲಿ ಪಿಟ್‌ನಿಂದ ವಿಚ್ಛೇದನ ಪಡೆಯುವುದಾಗಿ ಜೋಲಿ ಕೋರ್ಟ್ ಮೆಟ್ಟಿಲೇರಿದ್ದರು. 2019ರಲ್ಲಿ ಈ ಜೋಡಿ ಅಂತಿಮವಾಗಿ ವಿಚ್ಛೇದನ ಪಡೆದಿತ್ತು‌. ದಂಪತಿಗೆ ಆರು ಮಂದಿ ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.