ನವೆಂಬರ್ ತಿಂಗಳ ಕೊನೆಯ ವಾರವು ಸಿನಿಮಾ ಪ್ರೇಮಿಗಳ ಪಾಲಿಗೆ ಚಿಕ್ಕ ಸಿನಿಮೋತ್ಸವದ ರೀತಿಯಲ್ಲಿ ಇತ್ತು. ನವೆಂಬರ್ 29ರಂದು ಒಟ್ಟು 45 ಸಿನಿಮಾಗಳು ಬಿಡುಗಡೆ ಆಗಿದ್ದವು! ಅವುಗಳ ಪೈಕಿ ಕನ್ನಡ ಸಿನಿಮಾಗಳ ಸಂಖ್ಯೆ ಒಂಬತ್ತು.
ಅಂದು ಬಿಡುಗಡೆ ಆದ ಸಿನಿಮಾಗಳಲ್ಲಿ ನೀನಾಸಂ ಸತೀಶ್ ಅಭಿನಯದ ‘ಬ್ರಹ್ಮಚಾರಿ’ ಕೂಡ ಒಂದು. ಬ್ರಹ್ಮಚಾರಿ ಯುವಕನ ಪ್ರಸ್ತ ಪುರಾಣದ ಕಥೆ ಹೊಂದಿರುವ ಈ ಚಿತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ, ಕೈಹಿಡಿದು ಮುನ್ನಡೆಸಿದ್ದಾರೆ ಎಂದು ಹೇಳಿದೆ ಚಿತ್ರತಂಡ.
ಇದನ್ನೂ ಓದಿ...ಸತೀಶ್ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ
ಚಿತ್ರವು ಆರಂಭದಲ್ಲಿ 200 ಕೇಂದ್ರಗಳಲ್ಲಿ ಬಿಡುಗಡೆ ಆಗಿತ್ತು. ಈಗ ಅದನ್ನು 225 ಕೇಂದ್ರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ ನಿರ್ಮಾಪಕ ಉದಯ್ ಮೆಹ್ತಾ. ‘ಆರ್ಥಿಕ ಹಿಂಜರಿತ ಇದ್ದರೂ, ಚಿತ್ರವನ್ನು ವೀಕ್ಷಕರು ಕೈಹಿಡಿದು ನಡೆಸಿದ್ದಾರೆ. ಈ ಸಿನಿಮಾ ಚಿತ್ರಪ್ರೇಮಿಗಳ ಹೃದಯ ಗೆದ್ದಿದೆ’ ಎನ್ನುವುದು ಸತೀಶ್ ಅವರ ಮಾತು.
ನಿರ್ಮಾಪಕ ಮೆಹ್ತಾ ಅವರು ತಾವು ಹೂಡಿದ ಬಂಡವಾಳ ವಾಪಸ್ ಬಂದಿರುವ ಖುಷಿಯಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.