ADVERTISEMENT

ಎಲ್ಲಾ ಸಿನಿಮಾಗಳಲ್ಲೂ ನಾನು ನಟಿಸಲಾರೆ; ಹೊಸಬರಿಗೂ ಜಾಗ ನೀಡಬೇಕು– ಆಮಿರ್ ಖಾನ್

ಪಿಟಿಐ
Published 10 ಆಗಸ್ಟ್ 2024, 9:39 IST
Last Updated 10 ಆಗಸ್ಟ್ 2024, 9:39 IST
<div class="paragraphs"><p>ಆಮಿರ್ ಖಾನ್</p></div>

ಆಮಿರ್ ಖಾನ್

   

ನವದೆಹಲಿ: ‘ಆಸಕ್ತಿದಾಯಕ ಕಥೆ ಇದೆ ಎಂದ ಮಾತ್ರಕ್ಕೆ ಎಲ್ಲಾ ಚಿತ್ರಗಳಲ್ಲೂ ನಟಿಸಲಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಹೀಗಾಗಿ ‘ಲಾಪತಾ ಲೇಡಿಸ್’ ಚಿತ್ರವನ್ನು ನಿರ್ಮಾಣ ಮಾಡಿದೆ’ ಎಂದು ಬಾಲಿವುಡ್‌ ನಟ ಆಮಿರ್ ಖಾನ್ ಹೇಳಿದ್ದಾರೆ.

‘ನನ್ನ ವೃತ್ತಿ ಭವಿಷ್ಯದ ಕುರಿತು ಆಲೋಚಿಸಲು ನನಗೆ ಕೋವಿಡ್‌ –19ರ ಅವಧಿಯು ಹೆಚ್ಚು ಸಹಕಾರಿಯಾಗಿತ್ತು. ಆಗ ನನಗೆ 56 ವರ್ಷ. ಮುಂದೆ ಸುಮಾರು 15 ವರ್ಷಗಳ ಕಾಲ ನಾನು ಈ ಕ್ಷೇತ್ರದಲ್ಲಿ ಕ್ರಿಯಾಶೀಲನಾಗಿರಬಲ್ಲೆ. ಅಂದರೆ ನನ್ನ 70ನೇ ವಯಸ್ಸಿನವರೆಗೆ ಕೆಲಸ ಮಾಡಬಲ್ಲೆ. ಆಮೇಲೆ ಏನಾಗುತ್ತದೋ ಯಾರಿಗೆ ಗೊತ್ತು?‘ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ADVERTISEMENT

‘ಹೊಸ ತಲೆಮಾರಿನ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟ ನನ್ನ ಮೊದಲ ಚಿತ್ರವೇ ‘ಲಾಪತಾ ಲೇಡಿಸ್’. ಈ ದೇಶ, ಸಮಾಜ ಹಾಗೂ ಚಿತ್ರೋದ್ಯಮವು ನನಗೆ ಸಾಕಷ್ಟು ನೀಡಿದೆ. ಈಗ ಇವುಗಳಿಗೆ ಮರಳಿ ನನ್ನ ಕೈಲಾದ್ದನ್ನು ನೀಡುವುದು ನನ್ನ ಸರದಿ. ಹೀಗಾಗಿ ನಾನು ಸದ್ಯ  ನಟನಾಗಿ ಮೂರು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದೇನೆ. ನಿರ್ಮಾಪಕನಾಗಿ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದೇನೆ’ ಎಂದರು.

‘ನನ್ನ ಹೃದಯಕ್ಕೆ ಹೆಚ್ಚು ಹತ್ತಿರವಾಗುವ ಕಥೆಯನ್ನು ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ನಿರ್ಮಿಸುವ ಎಲ್ಲಾ ಚಿತ್ರಗಳಲ್ಲಿ ನಾನು ನಟಿಸಲು ಸಾಧ್ಯವಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವುದು ನನ್ನ ಉ್ದದೇಶ. ಹೊಸ ಬರಹಗಾರರಿಗೆ, ನಿರ್ದೇಶಕರಿಗೆ, ಕಲಾವಿದರು ಹಾಗೂ ಚಿತ್ರ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ವಿಭಾಗಗಳಲ್ಲೂ ಹೊಸಬರಿಗೆ ಅವಕಾಶ ನೀಡಬೇಕೆಂಬ ಇರಾದೆ ಹೊಂದಿದ್ದೇನೆ. ಇಂಥ ಪರಿಕಲ್ಪನೆಯ ಮೊದಲ ಚಿತ್ರವೇ ‘ಲಾಪತಾ ಲೇಡಿಸ್’. ಇಂಥ ಪ್ರತಿಭೆಗಳನ್ನು ಹೊರತರಬೇಕು ಎಂಬುದೇ ನನ್ನ ಉದ್ದೇಶ’ ಎಂದು ಆಮೀರ್ ಹೇಳಿದ್ದಾರೆ.

ಗ್ರಾಮೀಣ ಪ್ರದೇಶದ ಇಬ್ಬರು ವಧುಗಳು ಆಕಸ್ಮಿಕವಾಗಿ ಅದಲುಬದಲಾಗುವ ಹೃದಯಸ್ಪರ್ಶಿ ಹಾಗೂ ಮಹಿಳಾ ಸಬಲೀಕರಣದ ಆಶಯದ ಚಿತ್ರ ಲಾಪತಾ ಲೇಡಿಸ್. ಚಿತ್ರದಲ್ಲಿ ನಿತಾಂಶಿ ಗೋಯಲ್, ಪ್ರತಿಭಾ ರಂತಾ, ಸ್ಪರ್ಶ ಶ್ರೀತಾಸ್ತವ ಮತ್ತು ರವಿ ಕಿಶನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಜಿಯೊ ಸ್ಟುಡಿಯೊಸ್, ರಾವ್ ಕಿಂಡ್ಲಿಂಗ್ ಪ್ರೊಡಕ್ಷನ್ ಹಾಗೂ ಆಮಿರ್ ಖಾನ್ಸ್ ಪ್ರೊಡಕ್ಷನ್ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.