ADVERTISEMENT

Locarno Film Festival: ಪ್ರಶಸ್ತಿ ಹೆಸರು ಹೇಳಲಾಗದೆ ಪರದಾಡಿದ ನಟ ಶಾರುಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2024, 10:08 IST
Last Updated 11 ಆಗಸ್ಟ್ 2024, 10:08 IST
<div class="paragraphs"><p>ಲೋಕಾರ್ನೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಶಾರುಕ್ ಖಾನ್</p></div>

ಲೋಕಾರ್ನೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಶಾರುಕ್ ಖಾನ್

   

ಪಿಟಿಐ

ಇಟಲಿ: ಲೋಕಾರ್ನೊ ಫಿಲ್ಮ್‌ ಫೆಸ್ಟಿವಲ್–2024ರ ಜೀವಮಾನ ಸಾಧನೆ ಪ್ರಶಸ್ತಿಯನ್ನು(ಪಾರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ-ಲೊಕಾರ್ನೊ ಟೂರಿಸಂ) ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆ ಶಾರುಕ್‌ ಖಾನ್‌ ಪಾತ್ರರಾಗಿದ್ದಾರೆ.

ADVERTISEMENT

ವೇದಿಕೆ ಮೇಲೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾರುಕ್, ಪ್ರಶಸ್ತಿಯ ಹೆಸರು ಹೇಳಲು ಬಾರದೆ ಪರದಾಡಿದ್ದಾರೆ. ಹೆಸರು ಹೇಳಲು ಬಾರದೆ ಇರುವುದನ್ನು ವೇದಿಕೆಯ ಮೇಲೆ ಒಪ್ಪಿಕೊಂಡಿದ್ದಾರೆ.

‘ನನ್ನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯ ಹೆಸರು ಹೇಳಲು ನಾನು ಪ್ರಯತ್ನಿಸುತ್ತಿದ್ದೇನೆ...’ ಎಂದು ಹೇಳಿ ನಕ್ಕಿದ್ದಾರೆ.

‘ಲಿಯೋಪಾರ್ಡ್ ಪ್ರಶಸ್ತಿ (ಪಾರ್ಡೊ ಅಲ್ಲಾ ಕ್ಯಾರಿಯರಾ) ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾಗಿದೆ’ ಎಂದರು.

ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಪ್ರಶಸ್ತಿಯ ಹೆಸರು ಉಚ್ಛರಿಸಲು ಶಾರುಕ್ ಪ್ರಯತ್ನಿಸಿದ್ದಾರೆ. ಕೊನೆಯಲ್ಲಿ ‘ಅರಿವೆದರ್ಸೆ(ಇಟಾಲಿಯನ್‌ ಭಾಷೆಯಲ್ಲಿ ಗುಡ್‌ಬೈ) ಹಾಗೆ ಈ ಪ್ರಶಸ್ತಿಗೆ ಚಿಕ್ಕ ಹೆಸರನ್ನು ಇಡಬಹುದೆ?’ ಎಂದು ನಗುತ್ತಾ ಕೇಳಿದ್ದಾರೆ.

ಜೀವನಮಾನ ಸಾಧನೆ ಪ್ರಶಸ್ತಿಗೆ ಶಾರುಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಮಾತನಾಡಿದ ಲೊಕಾರ್ನೊ ಚಲನಚಿತ್ರೋತ್ಸವದ ನಿರ್ದೇಶಕ ಜಿಯೋನಾ ಎ. ನಝಾರೊ, ಶಾರುಕ್ ಖಾನ್ ಒಬ್ಬ ಉತ್ತಮ ಕಲಾವಿದರಾಗಿದ್ದಾರೆ. ತಮ್ಮ ಕೆಲಸದ ಮೂಲಕ ಎಷ್ಟೋ ಜನರ ಕನಸು ಮತ್ತು ಭರವಸೆಗಳನ್ನು ನನಸು ಮಾಡಿದ್ದಾರೆ. ಹಾಗಾಗಿಯೇ ಈ ಪ್ರಶಸ್ತಿಗೆ ಶಾರುಕ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.