ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಮಾಫಿಯಾದಲ್ಲಿ ಭಾಗಿಯಾಗಿದ್ದ ಆರೋಪದಡಿ ರಾಗಿಣಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಪೊಲೀಸರು, ರಾಗಿಣಿ ಅವರ ಸ್ನೇಹಿತ ರವಿಶಂಕರ್ ಅವರನ್ನು ಬಂಧಿಸಿದ್ದರು.
ರಾಗಿಣಿ ಅವರೂ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಅನುಮಾನ ಪೊಲೀಸರಿಗೆ ಇದೆ. ಅದೇ ಕಾರಣಕ್ಕೆ ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿರುವ ರಾಗಿಣಿ ಅವರ ಫ್ಲ್ಯಾಟ್ ಮೇಲೆಸಿಸಿಬಿ ದಾಳಿ ಮಾಡಿದೆ. ಮನೆಯಲ್ಲಿ ರಾಗಿಣಿ ಇಲ್ಲವೆಂದು ಗೊತ್ತಾಗಿದೆ.
'ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ರಾಗಿಣಿ ಮನೆ ಮೇಲೆ ಸಿಸಿಬಿಯ ವಿಶೇಷ ತಂಡಗಳು ದಾಳಿ ಮಾಡಿವೆ. ತಪಾಸಣೆ ನಡೆಸುತ್ತಿವೆ' ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.