ADVERTISEMENT

Photos: 2021ರಲ್ಲಿ ದೂರವಾದ ಸೆಲೆಬ್ರಿಟಿ ಜೋಡಿಗಳು

2021ನೇ ವರ್ಷವು ಕೆಲವರಿಗೆ ಖುಷಿ ಗಳಿಗೆಗಳನ್ನು ನೀಡಿದರೆ, ಇನ್ನು ಕೆಲವರಿಗೆಆಘಾತಗಳನ್ನು ತಂದಿತು. ಇದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲದೇಹೈ-ಪ್ರೊಫೈಲ್ ಸೆಲೆಬ್ರಿಟಿ ಜೋಡಿಗಳಿಗೂ ಅನ್ವಯಿಸುತ್ತದೆ. 2021ರಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ದೂರವಾದರು. ಅಂತಹ ಜೋಡಿಯ ಫೋಟೊಗಳನ್ನು ಇಲ್ಲಿ ನೋಡಬಹುದು.

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 12:33 IST
Last Updated 31 ಡಿಸೆಂಬರ್ 2021, 12:33 IST
   
ಬಾಲಿವುಡ್‌ ನಟ ಆಮಿರ್‌ ಖಾನ್‌ ಮತ್ತು ನಿರ್ಮಾಪಕಿ ಕಿರಣ್‌ ರಾವ್‌ (ಜು.3) ತಮ್ಮ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನದ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದರು.
ತೆಲುಗು ಸಿನಿಮಾ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ನಡುವಿನ ದಾಂಪತ್ಯ ಅ.2ರಂದು ಮುರಿದು ಬಿದ್ದಿತು.
ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌ ಅವರು ಪ್ರಿಯಕರ ರೋಹಮನ್ ಶಾಲ್ ಅವರೊಂದಿಗಿನ ಸಂಬಂಧವನ್ನು ಡಿ.23ರಂದು ಕಡಿದುಕೊಂಡರು.
ಖ್ಯಾತ ನಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್‌ ಜೊತೆಗಿನ ಮದುವೆಗೆ ಜೂನ್‌ನಲ್ಲಿ ಅಂತ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.