ಬೆಂಗಳೂರು: ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿರುವ ‘ಚೆಲ್ಲೋ ಶೋ’ ಚಿತ್ರದಲ್ಲಿ ಅಭಿನಯಿಸಿದ್ದ 10 ವರ್ಷದ ಬಾಲಕ ರಾಹುಲ್ ಕೋಲಿ ಲುಕೇಮಿಯಾದಿಂದ (ರಕ್ತ ಕ್ಯಾನ್ಸರ್) ಮೃತಪಟ್ಟಿದ್ದಾನೆ. ಇದೇ 14ರಂದು ಚಿತ್ರವು ಬಿಡುಗಡೆಯಾಗಲಿದೆ.
‘ಅಕ್ಟೋಬರ್ 2ರಂದು ರಾಹುಲ್ ಬೆಳಿಗ್ಗೆ ತಿಂಡಿ ತಿಂದಿದ್ದ. ಪದೇ ಪದೇ ಜ್ವರ ಬರುತ್ತಲೇ ಇತ್ತು. ಸ್ಪಲ್ಪ ಹೊತ್ತಿಲ್ಲನೇ ಮೂರು ಬಾರಿ ರಕ್ತದ ವಾಂತಿ ಮಾಡಿಕೊಂಡು. ನಂತರ ಆತ ನಮ್ಮೆಲ್ಲಾ ಬಿಟ್ಟು ಹೊರಟು ಹೋದ’ ಎಂದು ಬಾಲಕನ ತಂದೆ ಆಟೋರಿಕ್ಷಾ ಚಾಲಕ ರಾಮು ಕೋಲಿ ದುಃಖಿಸಿದರು.
‘ಸಿನಿಮಾದಲ್ಲಿ ಅಭಿನಯಿಸಿ ಆತನಿಗೆ ಬಹಳ ಖುಷಿಯಾಗಿತ್ತು. ನೋಡು ಅಪ್ಪಾ, ಅಕ್ಟೋಬರ್ 14ರ ನಂತರ ನಮ್ಮ ಜೀವನವೇ ಬದಲಾಗಲಿದೆ ಎಂದು ರಾಹುಲ್ ಹೇಳುತ್ತಿದ್ದ’ ಎಂದು ರಾಮು ಅವರು ನೆನಪಿಸಿಕೊಂಡರು. ‘ಅಕ್ಟೋಬರ್ 14ರಂದು ನಾವು ಕುಟುಂಬದವರೆಲ್ಲಾ ರಾಹುಲ್ ಅಭಿನಯವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತೇವೆ’ ಎಂದು ರಾಮು ಅವರು ಹೇಳಿದರು.
ಚಿತ್ರದ ನಿರ್ದೇಶಕ ನಳಿನ್ ಪಾಂಡ್ಯ ಪ್ರತಿಕ್ರಿಯಿಸಿ, ‘ಇಡೀ ಚಿತ್ರತಂಡ ಕೊನೆಯ ಕ್ಷಣದಲ್ಲಿ ರಾಹುಲ್‌ನ ಜತೆಗಿತ್ತು. ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.