ಶರಣ್ ಜೊತೆ ‘ಅಧ್ಯಕ್ಷ’ ಸಿನಿಮಾ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ ಈ ಬಾರಿ ‘ಉಪಾಧ್ಯಕ್ಷ’ನಾಗಲು ಸಿದ್ಧತೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಈ ಶೀರ್ಷಿಕೆ ಹೊಳೆದದ್ದೇ ಅಧ್ಯಕ್ಷ ಚಿತ್ರದಿಂದ ಎನ್ನುತ್ತಾರೆ ಅವರು.
ಚಂದ್ರ ಅವರು ಚಿತ್ರದ ನೇತೃತ್ವ ವಹಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ. ಚಂದ್ರು ಅವರ ‘ಬಾಂಬೆ ಮಿಠಾಯಿ’, ‘ಡಬಲ್ ಎಂಜಿನ್’ ಚಿತ್ರಗಳ ನಂತರ ಚಿಕ್ಕಣ್ಣಅವರು ಚಂದ್ರು ಅವರ ತಂಡ ಸೇರಿಕೊಂಡಿದ್ದಾರೆ.
ಪಿ.ರವಿಶಂಕರ್, ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಹಜವಾಗಿ ಚಿತ್ರದಲ್ಲಿ ಚಿಕ್ಕಣ್ಣ ಅವರ ಹಾಸ್ಯಪ್ರಧಾನ ಪಾತ್ರವಿದೆ. ಚಿಕ್ಕಣ್ಣ ಅವರ ಚಿತ್ರಗಳೆಂದರೆ ಹಾಗೆಯೇ. ಹಾಸ್ಯವಿಲ್ಲದೆಅವರ ಚಿತ್ರವನ್ನು ಊಹಿಸಲು ಅಸಾಧ್ಯ.
ಹಾಸ್ಯದ ಎಳೆಯೊಂದಿಗೆ ಕೌಟುಂಬಿಕ ಮೌಲ್ಯಗಳನ್ನು ವಿವರಿಸುವ ಚಿತ್ರ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ.
ಹಳ್ಳಿಯ ವ್ಯಕ್ತಿ ‘ನಾರಾಯಣ’ನಾಗಿ ಈ ಚಿತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮಂಡ್ಯದ ಹಳ್ಳಿಯೊಂದರಲ್ಲಿ ಕಥೆ ಆರಂಭವಾಗುತ್ತದೆ. ಮುಂದೆ ದಾರ್ಜಿಲಿಂಗ್‌ನಿಂದ ಮುನ್ನಾರ್‌ವರೆಗೆ ಪಯಣ ಬೆಳೆಸುತ್ತದೆ. ನವೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ದಾರ್ಜಿಲಿಂಗ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ಚಿಕ್ಕಣ್ಣ ಇದುವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಭರತ ಬಾಹುಬಲಿ’ ಅವರ ಇತ್ತೀಚಿನ ಚಿತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.