ADVERTISEMENT

₹11 ಕೋಟಿ ವಂಚನೆ:ನೃತ್ಯ ನಿರ್ದೇಶಕ ರೆಮೊ ಡಿಸೋಜಾ, ಪತ್ನಿ ಸೇರಿ ಐವರ ವಿರುದ್ಧ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2024, 10:49 IST
Last Updated 19 ಅಕ್ಟೋಬರ್ 2024, 10:49 IST
<div class="paragraphs"><p>ರೆಮೊ ಡಿಸೋಜಾ</p></div>

ರೆಮೊ ಡಿಸೋಜಾ

   

Credit: X/@remodsouza

ಠಾಣೆ: ಡಾನ್ಸರ್‌ಗಳಿಗೆ ₹11.96 ಕೋಟಿ ವಂಚಸಿದ ಆರೋಪದ ಮೇಲೆ ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾ, ಅವರ ಪತ್ನಿ ಸೇರಿದಂತೆ ಇತರ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ADVERTISEMENT

26 ವರ್ಷದ ಡಾನ್ಸರ್‌ರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮೀರಾರೋಡ್ ಪೊಲೀಸ್ ಠಾಣೆಯಲ್ಲಿ ಡಿಸೋಜಾ, ಅವರ ಪತ್ನಿ ಲಿಜೆಲ್ಲಿ ಡಿಸೋಜಾ, ಇತರ ಐವರ ವಿರುದ್ಧ ಐಪಿಸಿ ಸೆಕ್ಷನ್ 465, 420 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ತಂಡವು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಆದರೆ, ರೆಮೊ ಡಿಸೋಜಾ ಸೇರಿದಂತೆ ಆರೋಪಿಗಳ ಗುಂಪು ನಮ್ಮ ತಂಡವನ್ನು ತಮ್ಮದೆಂದು ಹೇಳಿಕೊಂಡು ₹11.96 ಕೋಟಿ ಮೊತ್ತದ ಬಹುಮಾನವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಇತರ ಆರೋಪಿಗಳಾದ ಓಂಪ್ರಕಾಶ್ ಶಂಕರ್ ಚೌಹಾಣ್, ಪ್ರೇಮ್ ಪ್ರೊಡಕ್ಷನ್ ಕಂಪನಿಯ ರೋಹಿತ್ ಜಾಧವ್, ವಿನೋದ್ ರಾವುತ್ ಮತ್ತು ರಮೇಶ್ ಗುಪ್ತಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.