ADVERTISEMENT

ಸಿನಿ ಸಮ್ಮಾನ | ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 23:50 IST
Last Updated 4 ಜುಲೈ 2024, 23:50 IST
<div class="paragraphs"><p>ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ಮದನ್‌ ಹರಿಣಿ ಹಾಗೂ ಕೆನರಾ ಬ್ಯಾಂಕ್‌ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಮಹೇಶ್‌ ಎಂ ಪೈ ಅವರು ಧನಂಜಯ್‌ ರಾಜನ್‌ ಅವರಿಗೆ ಪ್ರಶಸ್ತಿ ನೀಡಿದರು.</p></div>

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ಮದನ್‌ ಹರಿಣಿ ಹಾಗೂ ಕೆನರಾ ಬ್ಯಾಂಕ್‌ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಮಹೇಶ್‌ ಎಂ ಪೈ ಅವರು ಧನಂಜಯ್‌ ರಾಜನ್‌ ಅವರಿಗೆ ಪ್ರಶಸ್ತಿ ನೀಡಿದರು.

   

ಧನಂಜಯ ರಾಜನ್‌ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ‘ನದಿಯೇ ಓ ನದಿಯೇ’ (ಶೀರ್ಷಿಕೆ ಗೀತೆ) ಗೀತೆಯ ಸಾಹಿತ್ಯಕ್ಕಾಗಿ ಪುರಸ್ಕೃತರಾದರು. ಇವರಿಗೆ ನೃತ್ಯ ಸಂಯೋಜಕಿ ಮದನ್‌ ಹರಿಣಿ ಪ್ರಶಸ್ತಿ ನೀಡಿದರು.

ನಾಮನಿರ್ದೇಶನಗೊಂಡಿದ್ದವರು

ADVERTISEMENT

l ಬಿ.ಎಸ್‌.ಲಿಂಗದೇವರು ಚಿತ್ರ: ವಿರಾಟಪುರ ವಿರಾಗಿ

l ಪೃಥ್ವಿ ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ

l ಡಾಲಿ ಧನಂಜಯ ಚಿತ್ರ: ಟಗರು ಪಲ್ಯ

l ಡಾ.ದೊಡ್ಡರಂಗೇಗೌಡ ಚಿತ್ರ: ಮಾವು ಬೇವು

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಶೀರ್ಷಿಕೆ ಗೀತೆಗಾಗಿ ಕಪಿಲ್‌ ಕಪಿಲನ್‌ ಪ್ರಶಸ್ತಿ ಪಡೆದರು.

ನಾಮನಿರ್ದೇಶನಗೊಂಡಿದ್ದವರು

l ರವೀಂದ್ರ ಸೊರಗಾವಿ ಚಿತ್ರ: ವಿರಾಟಪುರ ವಿರಾಗಿ

l ಸಿದ್ಧಾರ್ಥ್‌ ಬೆಳ್ಮಣ್‌ ಚಿತ್ರ: ಸಪ್ತ ಸಾಗರದಾಚೆ ಎಲ್ಲೋ

l ವಿಜಯ ಪ್ರಕಾಶ್‌ ಚಿತ್ರ: ಕಾಟೇರ

l ವಾಸುಕಿ ವೈಭವ್‌ ಚಿತ್ರ: ಡೇರ್‌ ಡೇವಿಲ್‌ ಮುಸ್ತಾಫಾ

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಗೀತೆಗಾಗಿ ಹಿನ್ನೆಲೆ ಗಾಯಕಿ ಶ್ರೀಲಕ್ಷ್ಮಿ ಬೆಳ್ಮಣ್‌ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಗಾಯಕರಾದ ವಿಜಯ್‌ ಪ್ರಕಾಶ್‌ ಹಾಗೂ ಗಾಯಕಿ ಎಂಡಿ ಪಲ್ಲವಿ ಪ್ರಶಸ್ತಿ ನೀಡಿದರು.‘ನಾನು ಹಾಡಿದ ಹಾಡು ಇಷ್ಟೊಂದು ಜನರಿಗೆ ತಲುಪುತ್ತದೆ ಅಂತ ತಿಳಿದಿರಲಿಲ್ಲ. ನನ್ನ ಹೆಸರು ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ ಅಂತ ತಿಳಿದಾಗ ಆಶ್ಚರ್ಯ ಆಯಿತು. ‘ಕಡಲನು ಕಾಣ ಹೊರಟಿರೊ’ ಹಾಡು ಈಗ ನನ್ನಲ್ಲಿ ರಕ್ತಗತವಾದಂತೆ ಭಾಸವಾಗುತ್ತಿದೆ. ಪ್ರಶಸ್ತಿ ದೊರೆತಾಗ ಅದರಿಂದ ಪ್ರೋತ್ಸಾಹ ಮತ್ತು ಮಾನ್ಯತೆ ದೊರೆಯುತ್ತದೆ. ಮುಂದೆ ಉತ್ತಮ ಸಾಧನೆ ಮಾಡಲು ನೆರವಾಗುತ್ತದೆ’ ಎಂದು ಗಾಯಕಿ ಶ್ರೀಲಕ್ಷ್ಮಿ ಬೆಳ್ಮಣ್ ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.