ADVERTISEMENT

80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯೂ ಕನ್ನಡದಲ್ಲಿ ಕೆಲಸ ಮಾಡಿದ್ದ ಗಂಗು ರಾಮ್‌ಸಿ: ಖ್ಯಾತ ‘ರಾಮ್‌ಸಿ ಬ್ರದರ್ಸ್‌’ ಕುಟುಂಬದ ಸದಸ್ಯರಾಗಿದ್ದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2024, 11:21 IST
Last Updated 7 ಏಪ್ರಿಲ್ 2024, 11:21 IST
<div class="paragraphs"><p>ಗಂಗು ರಾಮ್‌ಸಿ</p></div>

ಗಂಗು ರಾಮ್‌ಸಿ

   

ಮುಂಬೈ: 1970–90ರ ದಶಕದಲ್ಲಿ ತಮ್ಮದೇ ಶೈಲಿಯ ಹಾರರ್ ಸಿನಿಮಾಗಳಿಂದ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಖ್ಯಾತ ಛಾಯಾಗ್ರಾಹಕ (ಸಿನಿಮಾಟೋಗ್ರಾಫರ್) ಹಾಗೂ ನಿರ್ಮಾಪಕ ಗಂಗು ರಾಮ್‌ಸಿ ಅವರು ಭಾನುವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಬಾಲಿವುಡ್‌ನ ‘ರಾಮ್‌ಸಿ ಬ್ರದರ್ಸ್‌’ ಆ ಕಾಲದಲ್ಲಿ ಹಾರರ್ ಸಿನಿಮಾಗಳ ತಯಾರಿಕೆಯಲ್ಲಿ ಹೆಸರು ಮಾಡಿತ್ತು. ಈ ಕುಟುಂಬದ ಒಬ್ಬ ಸದಸ್ಯರಾಗಿದ್ದ ಗಂಗು ಅವರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ನಿಧನರಾದರು.

ADVERTISEMENT

ಭಾನುವಾರ ಮಧ್ಯಾಹ್ನ ಗಂಗು ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಅವರ ಕುಟಂಬದವರು ತಿಳಿಸಿದ್ದಾರೆ.

ಪುರಾನಿ ಹವೇಲಿ, ಪುರಾನಿ ಮಂದಿರ್, ತೆಹ್‌ಖಾನಾ, ಅಂದೇರಾ, ಗೆಸ್ಟ್ ಹೌಸ್ ಎಂಬ ಭಯಾನಕ ಸಿನಿಮಾಗಳು ಸೇರಿದಂತೆ 50 ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಗಂಗು ಅವರು ಕೆಲ ಚಿತ್ರಗಳಿಗೆ ನಿರ್ಮಾಪಕರೂ ಆಗಿದ್ದರು.

ಬಾಲಿವುಡ್‌ನ ದಿವಂಗತ ನಿರ್ಮಾಪಕ ಎಫ್‌.ಯು. ರಾಮ್‌ಸಿ ಅವರ ಏಳು ಮಕ್ಕಳಲ್ಲಿ ಒಬ್ಬರಾಗಿದ್ದ ಗಂಗು, ಸೈಫ್ ಅಲಿ ಖಾನ್‌ ಹಾಗೂ ಅಕ್ಷಯ್ ಕುಮಾರ್ ಅವರ ಕೆಲ ಸಿನಿಮಾಗಳಿಗೂ ಛಾಯಾಗ್ರಾಹಕರಾಗಿದ್ದರು.

ಕನ್ನಡದಲ್ಲಿಯೂ ಕೆಲಸ

ರಾಮ್‌ಸಿ ಬ್ರದರ್ಸ್‌ ನಿರ್ಮಾಣ ಮಾಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕನ್ನಡ ಚಿತ್ರ ‘ಪೊಲೀಸ್ ಮತ್ತು ದಾದಾ’ ಎಂಬ ಸಿನಿಮಾಕ್ಕೂ ಗಂಗು ಅವರು ಸಿನಿಮಾಟೋಗ್ರಾಫರ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.