ಉದ್ಯಮಿ, ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಜೀವನಗಾಥೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ.
ಟಿ– ಸಿರೀಸ್ ಮತ್ತು ಅಲ್‌ಮೈಟಿ ಮೋಷನ್ ಪಿಕ್ಚರ್ಸ್ ಕಂಪನಿಗಳು ಕರ್ಮ ಮೀಡಿಯಾ ಎಂಟರ್‌ಟೈನ್‌ಮೆಂಟ್ ಸಹಯೋಗದಲ್ಲಿ ಈ ಚಿತ್ರ ನಿರ್ಮಿಸುತ್ತಿವೆ.
ತನಿಖಾ ಪತ್ರಕರ್ತರಾದ ರುಕ್ಮಿಣಿ ರಾವ್ ಮತ್ತು ಪ್ರೋಸೆನ್‌ಜಿತ್ ದತ್ತಾ ಅವರು ಬರೆದ ‘ಕಾಫಿ ಕಿಂಗ್– ದಿ ಸ್ವಿಫ್ಟ್ ರೈಸ್ ಆ್ಯಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ.ಜಿ. ಸಿದ್ಧಾರ್ಥ್’ ಕೃತಿ ಆಧರಿಸಿ ಈ ಚಿತ್ರ ತೆರೆಗೆ ಬರಲಿದೆ. ಕೃತಿಯ ಆಡಿಯೋ ಹಕ್ಕುಗಳನ್ನು ಚಿತ್ರ ನಿರ್ಮಾಣ ಸಂಸ್ಥೆಗಳು ಈಗಾಗಲೇ ಪಡೆದಿವೆ.
1996ರಲ್ಲಿ ಕೆಫೆ ಕಾಫಿ ಡೇ ಪರಿಚಯಿಸಿದ ಸಿದ್ಧಾರ್ಥ್ ವಿವಿಧ ರಾಷ್ಟ್ರಗಳಿಗೆ ಕಾಫಿಯ ಪರಿಮಳ ಹಬ್ಬಿಸಿದ್ದರು.ವಿಯೆನ್ನಾ, ಮಲೇಷ್ಯಾ, ಸಿಂಗಪುರ, ಝಕೊಸ್ಲೊವಾಕಿಯ ಸಹಿತ 7 ರಾಷ್ಟ್ರಗಳಲ್ಲಿ 1,800ಕ್ಕೂ ಹೆಚ್ಚು ಕಾಫಿ ಡೇ ಕೆಫೆಗಳಿವೆ. 2019ರ ಜುಲೈ 29ರಂದು ಸಿದ್ಧಾರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.