ADVERTISEMENT

ಗೆಳತಿ ಆನ್ಯಾ ರಂಗಸ್ವಾಮಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದಾನಿಶ್ ಸೇಠ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 11:25 IST
Last Updated 10 ಜೂನ್ 2021, 11:25 IST
ದಾನಿಶ್ ಸೇಠ್‌ ಮತ್ತು ಆನ್ಯಾ
ದಾನಿಶ್ ಸೇಠ್‌ ಮತ್ತು ಆನ್ಯಾ   

ನಟನೆ ಮತ್ತು ವಿಶಿಷ್ಟ ನಿರೂಪಣೆ ಮೂಲಕ ಕನ್ನಡಿಗರ ಮನಗೆದ್ದಿರುವ ಸ್ಟ್ಯಾಂಡ್‌ ಅಫ್‌ ಕಾಮಿಡಿಯನ್‌ ದಾನಿಶ್ ಸೇಠ್‌ ತಮ್ಮ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ಬುಧವಾರ ಮದುವೆಯಾಗಿದ್ದಾರೆ.

ದಾನಿಶ್, ರಿಜಿಸ್ಟರ್ ಮ್ಯಾರೇಜ್ ಆಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಆನ್ಯಾ ರಂಗಸ್ವಾಮಿ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರು.

‘ಆನ್ಯಾತನ್ನ ಜೀವನವನ್ನು ನನ್ನ ಜೊತೆ ಕಳೆಯಲು ಸಮ್ಮತಿ ನೀಡಿದ್ದಾರೆ, ಇದರಿಂದ ನನಗೆ ತುಂಬಾ ಸಂತಸವಾಗಿದೆ. ಅವರಿಗೆ ನನ್ನ ಧನ್ಯವಾದಗಳು‘ಎಂದಿದ್ದಾರೆ.‘ಬುಧವಾರ (ಜೂನ್‌.9) ನಮ್ಮ ಕುಟುಂಬದ ಹತ್ತಿರದವರ ಸಮ್ಮುಖದಲ್ಲಿಅನ್ಯಾ ಮತ್ತು ನಾನು ಉಂಗುರ ಬದಲಾಯಿಸಿಕೊಂಡೆವು. ಇನ್ನು ನಾವು ಪ್ರೀತಿಯಿಂದ ಹೊಸ ಜೀವನ ಆರಂಭಿಸುತ್ತಿದ್ದೇವೆ. ನಮಗೆ ಆಶೀರ್ವಾದ ಮಾಡಿ ಎಂದು ದಾನಿಶ್‌ ಗುರುವಾರ ಬರೆದುಕೊಂಡಿದ್ದಾರೆ.

ADVERTISEMENT

ಆನ್ಯಾ ಮತ್ತುದಾನಿಶ್ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಆನ್ಯಾ ಮುಂಬೈನಲ್ಲಿ ನೆಲೆಸಿದ್ದು ಗ್ರಾಫಿಕ್ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ‘ಹಂಬಲ್ ಪೊಲಿಟಿಶಿಯನ್ ನೋಗರಾಜ್'‌ ಕಾಮಿಡಿ ಸಿನಿಮಾದ ಮೂಲಕ ಪ್ರಚಾರಕ್ಕೆ ಬಂದ ದಾನಿಶ್‌ಗೆ ‘ಫ್ರೆಂಚ್ ಬಿರಿಯಾನಿ‘ ಸಿನಿಮಾ ಕೂಡ ಉತ್ತಮ ಹೆಸರು ತಂದುಕೊಟ್ಟಿದೆ.

ಸದ್ಯ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ನಡುವೆ ಐಪಿಎಲ್‌ ಕ್ರಿಕೆಟ್ ಕುರಿತ ಟಿವಿ ಹಾಗೂ ವಿಡಿಯೊ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.