ಮದ್ದೂರು: ಸಿನಿಮಾ ನಟಿ ರಚಿತಾ ರಾಮ್ ಅವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಶುಕ್ರವಾರ ದೂರು ದಾಖಲಿಸಿದೆ.
ಇತ್ತೀಚೆಗೆ ನಡೆದ ಕ್ರಾಂತಿ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಅವರು, ‘ಮೊದಲು ನೀವು ಜನವರಿ 26ಕ್ಕೆ ಗಣರಾಜ್ಯೋತ್ಸವ ಆಚರಿಸುತ್ತಿದ್ದಿರಿ. ಆದರೆ, ಈ ವರ್ಷ ಜ.26ಕ್ಕೆ ಕ್ರಾಂತಿಯೋತ್ಸವ ಆಚರಿಸಿ’ ಎಂದು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ದೂರು ದಾಖಲಿಸಲಾಗಿದೆ.
ಸಂವಿಧಾನಕ್ಕೆ ಅಪಮಾನ ಮಾಡುವಂಥ ಹೇಳಿಕೆ ನೀಡಿರುವ ನಟಿ ರಚಿತಾ ರಾಮ್ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ, ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಪರಿಷತ್ ಸದಸ್ಯರು ಆಗ್ರಹಿಸಿದರು. ಪರಿಷತ್‌ನ ಎಂ.ಸಿ.ಬಸವರಾಜು, ಮರಳಿಗ ಶಿವರಾಜು, ಮಹೇಂದ್ರ, ಶಿವಲಿಂಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.