ADVERTISEMENT

‌‘ಶೂನ್ಯ’ ಬ್ರ್ಯಾಂಡ್‌ನ ಪಾಲುದಾರರಾದ ಶ್ರದ್ಧಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:39 IST
Last Updated 17 ಫೆಬ್ರುವರಿ 2021, 21:39 IST
ಶ್ರದ್ಧಾ ಕಪೂರ್ ಮತ್ತು ಸಿದ್ದೇಶ್ ಶರ್ಮಾ
ಶ್ರದ್ಧಾ ಕಪೂರ್ ಮತ್ತು ಸಿದ್ದೇಶ್ ಶರ್ಮಾ   

ಬೆಂಗಳೂರು: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಬೈದ್ಯನಾಥ್ ಸಮೂಹದಡಿ ಕಾರ್ಯನಿರ್ವಹಿಸುತ್ತಿರುವ ನೇಚರ್‌ಎಡ್ಜ್ ಬೆವರೇಜಸ್ ಪ್ರೈ.ಲಿ. ಹೊರತಂದಿರುವ ‘ಶೂನ್ಯ’ ಬ್ರ್ಯಾಂಡ್‌ನ ಬಂಡವಾಳ ಪಾಲುದಾರರಾಗಿದ್ದಾರೆ. ಸಿದ್ದೇಶ್ ಶರ್ಮಾ ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

‘ಶೂನ್ಯ ಬ್ರ್ಯಾಂಡ್‌ನಡಿ ಆಯುರ್ವೇದ ಪದ್ಧತಿ ಅನುಸಾರ ಸಂಶೋಧಿಸಲ್ಪಟ್ಟ ಗಿಡಮೂಲಿಕೆಗಳಿಂದ ತಯಾರಿಸಿದ ಶೂನ್ಯ ಗೊ, ಶೂನ್ಯ ಫಿಜ್‌ ಪಾನೀಯ ಜನಪ್ರಿಯವಾಗಿದೆ. 2019ರ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಇವುಗಳನ್ನು ಪರಿಚಯಿಸಲಾಯಿತು. ಅಲ್ಪಾವಧಿಯಲ್ಲಿಯೇ 15 ಸಾವಿರಕ್ಕೂ ಅಧಿಕ ಮಳಿಗೆಗಳು, ರೆಸ್ಟೋರೆಂಟ್, ಬಾರ್ ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್‌ ವೇದಿಕೆಗಳಲ್ಲಿ ಕೂಡ ಈ ಪಾನೀಯ ದೊರೆಯುತ್ತಿದೆ’ ಎಂದು ಕಂಪನಿ ತಿಳಿಸಿದೆ.

‘ನಮಗೆ ಪಾಲುದಾರರು ಬೇಕಿದ್ದರೇ ಹೊರತು ರಾಯಭಾರಿಗಳಲ್ಲ. ಶ್ರದ್ಧಾ ಕಪೂರ್ ಅವರು ನಮ್ಮ ಬ್ರ್ಯಾಂಡ್‌ನ ಉತ್ಪನ್ನಗಳ ಮೇಲೆ ವಿಶ್ವಾಸವಿಟ್ಟು, ಹೂಡಿಕೆ ಮಾಡಿದ್ದಾರೆ. ಮುಂದಿನ ಆರು ತಿಂಗಳಲ್ಲಿ 25 ಸಾವಿರ ಮಳಿಗೆಗಳಿಗೆ ಪರಿಚಯಿಸುವ ಗುರಿ ಹೊಂದಲಾಗಿದೆ’ ಎಂದು ಸಿದ್ದೇಶ್ ಶರ್ಮಾ ಹೇಳಿದ್ದಾರೆ.

ADVERTISEMENT

‘ಈ ಪಾನೀಯವು ರುಚಿಕರವಾಗಿರುವ ಜತೆಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಆರೋಗ್ಯ ವೃದ್ಧಿಗೆ ಸಹಕಾರಿ, ಎಲ್ಲ ರೀತಿಯಲ್ಲಿಯೂ ಪರಿಶೀಲಿಸಿದ ಬಳಿಕವೇ ಪಾಲುದಾರನಾಗಿದ್ದೇನೆ’ ಎಂದು ಶ್ರದ್ಧಾ ಕಪೂರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.