ADVERTISEMENT

VIDEO SONG ನೋಡಿ | ಕೊರೊನಾ ಕೊಲ್ಲೋಣ: ವೈರಲ್‌ ಆಯ್ತು ಗುರುಕಿರಣ್ ಹಾಡು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 8:13 IST
Last Updated 14 ಏಪ್ರಿಲ್ 2020, 8:13 IST
ಗುರುಕಿರಣ್‌
ಗುರುಕಿರಣ್‌   

ಬೆಂಗಳೂರು: ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಇಡೀ ಜಗತ್ತೆ ಲಾಕ್‌ಡೌನ್‌ ಆಗಿದೆ. ಇಂತಹ ಸಂದರ್ಭಗಳಲ್ಲಿ ಸಿನಿಮಾ ಮಂದಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಹಾಡುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಸೇರಿಸುತ್ತಿದ್ದಾರೆ.

ಬಾಲಿವುಡ್‌, ಟಾಲಿವುಡ್‌ ಸೇರಿದಂತೆ ನಮ್ಮ ಸ್ಯಾಂಡಲ್‌ವುಡ್‌ ತಾರೆಯರು ಇಂತಹ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಚಂದನ್‌ ಶೆಟ್ಟಿ ಹಾಡು ಕಟ್ಟಿ ಹಾಡಿದರೆ, ನಿರ್ದೇಶಕ ಪವನ್‌ ಒಡೆಯರ್‌ ಕೂಡ ಕೊರೊನಾ ಜಾಗೃತಿ ಬಗ್ಗೆ ಒಂದು ಕಿರುಚಿತ್ರವನ್ನು ನಿರ್ಮಿಸಿದ್ದಾರೆ.

ಇದೀಗ ಸಂಗೀತ ನಿರ್ದೇಶಕ ಗುರುಕಿರಣ್‌ ಕೂಡ ಹಾಡೊಂದನ್ನು ಯುಟ್ಯೂಬ್‌ಗೆ ಸೇರಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ADVERTISEMENT

ಕೊರೊನಾ ವೈರಸ್‌ ಕುರಿತಾದ ಹಾಡಿಗೆ ಸಂಗೀತ ನೀಡಿ ತಾವೇ ಹಾಡಿದ್ದಾರೆ. ಈ ಹಾಡಿನ ಮತ್ತೊಂದು ವಿಶೇಷ ಎಂದರೆ ಗುರುಕಿರಣ್ ಅವರೇ ಸಾಹಿತ್ಯ ರಚನೆ ಮಾಡಿರುವುದು.

ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬ ಆಶಯವನ್ನು ಈ ಹಾಡು ಹೊಂದಿದೆ. ಕೊರೊನಾ ವೈರಸ್‌ ಅನ್ನು ಕೊಂದು ನಾವು ಈ ಸಂಕಷ್ಟದಿಂದ ಬೇಗ ಹೊರಬರುತ್ತೇವೆ ಎಂಬ ಆಶಯವನ್ನು ಗುರುಕಿರಣ್‌ ಈ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.