ADVERTISEMENT

ವೀರಪ್ಪನ್‌ ಕುರಿತ ಚಿತ್ರಕ್ಕೆ ಸೆಷನ್ಸ್ ನ್ಯಾಯಾಲಯದಿಂದ ತಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:20 IST
Last Updated 13 ಜನವರಿ 2021, 3:20 IST
ವೀರಪ್ಪನ್‌
ವೀರಪ್ಪನ್‌   

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ ಜೀವನ ಚರಿತ್ರೆ ಆಧರಿಸಿ ನಿರ್ಮಿಸಿರುವ ‘ವೀರಪ್ಪನ್– ಹಂಗರ್‌ ಫಾರ್‌ ಕಿಲ್ಲಿಂಗ್‌’ ಎಂಬ ವೆಬ್‌ ಸೀರೀಸ್‌ ಚಿತ್ರವನ್ನು ಯೂ ಟ್ಯೂಬ್‌ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ನಗರದ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

ನಿರ್ದೇಶಕ ಎ.ಎಂ.ಆರ್‌. ರಮೇಶ್‌ ತಮ್ಮ ಎ.ಎಂ.ಆರ್‌. ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಿರುವ ವೆಬ್‌ ಸೀರೀಸ್‌ ಬಿಡುಗಡೆಗೆ ಅವಕಾಶ ನೀಡದಂತೆ ಕೋರಿ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ಹೊರಡಿಸಿದೆ.

‘ಲಿಖಿತ ಅನುಮತಿ ಪಡೆಯದೇ ತಮ್ಮ ಗಂಡನ ಕುರಿತಾಗಿ ಚಿತ್ರ ನಿರ್ಮಿಸಲಾಗಿದೆ. ಅಲ್ಲದೆ ನರಹಂತಕ, ಕಾಡುಗಳ್ಳ ಎಂದು ಬಿಂಬಿಸಲು ನಿರ್ದೇಶಕರು ಹೊರಟಿದ್ದಾರೆ. ಇದರಿಂದ ತಮ್ಮ ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗಲಿದೆ’ ಎಂದು ಮುತ್ತುಲಕ್ಷ್ಮಿ ದೂರಿದ್ದಾರೆ.

ADVERTISEMENT

'ಇದರಿಂದ ತಮ್ಮ ವೈಯಕ್ತಿಕ ಮತ್ತು ಗೌಪ್ಯತೆ ಹಕ್ಕು ಹರಣವಾಗಲಿದೆ. ಆದ್ದರಿಂದ ಸೀರಿಸ್ ಬಿಡುಗಡೆ ಮಾಡದಂತೆ ನಿರ್ಬಂಧ ಹೇರಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.