‘ಕ್ರಿಟಿಕಲ್ ಕೀರ್ತನೆಗಳು’-ಹೀಗೊಂದು ಕಂಗ್ಲಿಷ್ ಶೀರ್ಷಿಕೆಯ ಚಿತ್ರವೊಂದು ಮೇ 12ರಂದು ತೆರೆಗೆ ಬರುತ್ತಿದೆ. ಈಗಾಗಲೇ ಸೆನ್ಸಾರ್‌ನಿಂದ ‘ಯು/ಎ’ ಪ್ರಮಾಣಪತ್ರ ಈ ಚಿತ್ರಕ್ಕೆ ಸಿಕ್ಕಿದೆ.
ಈ ಹಿಂದೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್ ಎಲ್. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕುಮಾರ್, ‘ಇದೊಂದು ಐಪಿಎಲ್ ಬೆಟ್ಟಿಂಗ್ ಕಥಾಹಂದರ ಹೊಂದಿರುವ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಸಿನಿಮಾ, ಇದು ಪೂರ್ಣಪ್ರಮಾಣದ ಕೌಟುಂಬಿಕ ಮನರಂಜನಾ ಚಿತ್ರ’ ಎನ್ನುತ್ತಾರೆ.
ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಈ ಐಪಿಎಲ್ ಸೀಸನ್‌ನಲ್ಲಿ ಐಪಿಎಲ್ ಕುರಿತಾದ ‘ಐಪಿಎಲ್‌ನಲ್ ಎತ್ಕೊಂಡೆ ಕಾಲು...’ ಎಂಬ ನವೀನ್ ಸಜ್ಜು ಹಾಡಿರುವ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿಗೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರದಲ್ಲಿ ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪಾ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ ಶೆಟ್ಟಿ ಅಭಿನಯಿಸಿದ್ದಾರೆ.
‘ಕೇಸರಿ ಫಿಲಂಸ್ ಕ್ಯಾಪ್ಚರ್’ ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ, ಅರವ್ ರಿಶಿಕ್ ಹಿನ್ನಲೆ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.