ADVERTISEMENT

ಶಾರುಖ್‌ ಇರುವ ಜಾಹೀರಾತುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ‘ಬೈಜುಸ್‌’ 

ಐಎಎನ್ಎಸ್
Published 9 ಅಕ್ಟೋಬರ್ 2021, 12:26 IST
Last Updated 9 ಅಕ್ಟೋಬರ್ 2021, 12:26 IST
ಶಾರುಖ್ ಖಾನ್
ಶಾರುಖ್ ಖಾನ್    

ಬೆಂಗಳೂರು: ಆನ್‌ಲೈನ್ ಶಿಕ್ಷಣ ಒದಗಿಸುತ್ತಿರುವ ಸ್ಟಾರ್ಟ್ಅಪ್ಸಂಸ್ಥೆ ‘ಬೈಜುಸ್‌’ ತನ್ನ ಬ್ರಾಂಡ್ ಅಂಬಾಸಿಡರ್ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಇರುವ ತನ್ನ ಜಾಹೀರಾತುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ‌

ಶಾರುಖ್‌ ಮಗ ಆರ್ಯನ್ ಖಾನ್ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರು ಹಿನ್ನೆಲೆಯಲ್ಲಿ ‘ಬೈಜುಸ್‌’ ಈ ನಿರ್ಧಾರ ಕೈಗೊಂಡಿದೆ.

ನಟ ಶಾರುಖ್‌ ಅವರು 2017ರಿಂದಲೂ ‘ಬೈಜುಸ್‌’ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರನ್ನು ಒಳಗೊಂಡಿರುವ ಜಾಹೀರಾತುಗಳು ಪ್ರಸಾರವಾಗುತ್ತಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವರು ಟೀಕೆ ಮಾಡಿದ್ದರು. ಹೀಗಾಗಿ ‘ಬೈಜುಸ್‌’ಶಾರುಖ್ ಖಾನ್ ಅವರ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಶನಿವಾರ ಎಐಎನ್‌ಎಸ್‌ಗೆ ತಿಳಿಸಿವೆ.

ADVERTISEMENT

ಈ ಬಗ್ಗೆ ಮಾಹಿತಿ ಕೇಳಲು ಪ್ರಯತ್ನಸಲಾಯಿತಾದರೂ ’ಬೈಜುಸ್‌’ ಪ್ರತಿಕ್ರಿಯಿಸಿಲ್ಲ.

ಅಕ್ಟೋಬರ್ 3 ರಂದು ಮುಂಬೈ ಕಡಲ ತೀರದಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ತಂಡ, ಶಾರುಖ್‌ ಮಗ ಆರ್ಯನ್‌ ಖಾನ್, ಮುನ್ಮುನ್ ಧಮೆಚಾ ಮತ್ತು ಅರ್ಬಾಜ್ ಎಂಬುವವರನ್ನು ಬಂಧಿಸಿತ್ತು. ನಂತರ ಇತರ 5 ಮಂದಿಯನ್ನು ಸೆರೆ ಹಿಡಿಯಲಾಗಿತ್ತು. ಸದ್ಯ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.