ನಟ ವೆಂಕಟೇಶ್ ದಗ್ಗುಬಾಟಿ ವೆಬ್‌ಸಿರೀಸ್ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಡಲಿದ್ದಾರೆ.
ತೆಲುಗು ಭಾಷೆಯ ‘ಅಸುರನ್’ ರಿಮೇಕ್ ‘ನಾರಪ್ಪ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ವೆಂಕಟೇಶ್ ದಗ್ಗುಬಾಟಿ, ಆ ಚಿತ್ರದ ಕೆಲಸಗಳು ಮುಗಿದ ನಂತರ ಸಹೋದರ ಸುರೇಶ್ ಬಾಬು ನಿರ್ಮಾಣದ ವೆಬ್ ಸರಣಿಯಲ್ಲಿ ಬಣ್ಣ ಹಚ್ಚಲಿದ್ದಾರೆ.
ವೆಬ್ ಸರಣಿ ಬಗ್ಗೆ ಈಗಾಗಲೇ ಸುರೇಶ್ ಬಾಬು ಹಾಗೂ ವೆಂಕಟೇಶ್ ದಗ್ಗುಬಾಟಿ ಮಾತುಕತೆ ನಡೆಸಿದ್ದಾರೆ. ಈ ವೆಬ್ ಸರಣಿಯನ್ನು ‘ನುವ್ವು ನೇನು’ ಖ್ಯಾತಿಯ ತೇಜ ನಿರ್ದೇಶನ ಮಾಡಲಿದ್ದಾರೆ. ಮೇ ತಿಂಗಳೊಳಗೆ ಇದರ ಸ್ಕ್ರಿಪ್ಟ್ ಕೆಲಸ ಮುಗಿಯಲಿದೆ. ಲಾಕ್‌ಡೌನ್ ಮುಗಿದ ನಂತರ ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.