ದೊಡ್ಡ ದೊಡ್ಡ ಲಡ್ಡುಗಳನ್ನು ಇಡಿಯಾಗಿ ಬಾಯಿಗೆ ತುರುಕಿ ನುಂಗುತ್ತಲೇ ಅಸಾಮಾನ್ಯವಾದ ಮಾಯಾಶಕ್ತಿಯೊಂದಿಗೆ ಗದೆಯನ್ನೂ ಪಡೆಯುವ ಛೋಟಾ ಭೀಮ್ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ನೆಚ್ಚಿನ ಅನಿಮೇಷನ್ ಸೂಪರ್ ಹೀರೊ.
‘ಛೋಟಾ ಭೀಮ್’ ನನ್ನಿಷ್ಟದ ಅನಿಮೇಷನ್ ಕಾರ್ಟೂನ್ ಪಾತ್ರ ಎಂದು ಮಕ್ಕಳು ನಿದ್ದೆಗಣ್ಣಿನಲ್ಲೂ ಹೇಳಿಯಾರು. ಅಂತಹ ನಂಟು ಅವನೊಂದಿಗೆ.
ಛೋಟಾ ಭೀಮ್ ಈಗ ಕುಂಗ್‌ಫೂ ಶೈಲಿಯ ಕಸರತ್ತುಗಳನ್ನು ಮಾಡಲು ಸಜ್ಜಾಗಿದ್ದಾನೆ. ಚೀನಾಕ್ಕೆ ತನ್ನ ದೋಸ್ತಿಗಳೊಂದಿಗೆ ಭೇಟಿ ಕೊಡುವ ಛೋಟಾ ಭೀಮ್ ಅಲ್ಲಿ ಡ್ರ್ಯಾಗನ್‌ಗಳು ತಂದೊಡ್ಡುವ ಹಲವು ಮಸಲತ್ತುಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ಬೇಸಿಗೆ ರಜೆಗೂ ಮಕ್ಕಳ ಮನರಂಜನಾ ಕ್ಷೇತ್ರದಲ್ಲಿ ಹಲವು ಬಗೆಯ ಥ್ರಿಲ್ ಇದ್ದೇ ಇರುತ್ತದೆ. ಈ ಬಾರಿ ಛೋಟಾ ಭೀಮ್‌ನ ಹೊಸ ಅವತಾರ ಅದ್ಭುತ ಮನರಂಜನೆ ನೀಡಲಿದೆ.‘ಛೋಟಾ ಭೀಮ್ ಕುಂಗ್ ಫೂ ಧಮಾಕ‘ ಎಂಬ ಚಿತ್ರಮೇ 10ರಂದು ತೆರೆ ಕಾಣಲಿದೆ.
ಇನ್ನೊಂದು ವಿಶೇಷ ಆಕರ್ಷಣೆ ಏನೆಂದರೆ, ಸುಪ್ರಸಿದ್ಧ ಗಾಯಕ ದಲೇರ್ ಮಹೆಂದಿ ಈ ಚಿತ್ರದಲ್ಲಿ ವಿಶೇಷ ಹಾಡನ್ನು ಹಾಡಿದ್ದಾರೆ.
ದಲೇರ್‌ಗೆ ಛೋಟಾ ಭೀಮ್ ಎರಡು ಕಾರಣಕ್ಕೆ ಅಚ್ಚುಮೆಚ್ಚು ಅಂತೆ. ಒಂದು, ಅವರ ಐದು ವರ್ಷದ ಮಗಳಿಗೆ ಈ ಸರಣಿ ತುಂಬಾ ಇಷ್ಟವಂತೆ. ಮತ್ತೊಂದು ಕಾರಣವೆಂದರೆ, ಕುಂಗ್ ಫೂ ಸಾಹಸದೃಶ್ಯಗಳುಳ್ಳ ಚಿತ್ರಕ್ಕಾಗಿ ತಾನು ಹಾಡಲು ತಯಾರಿ ನಡೆಸುತ್ತಿದ್ದರೆ ಮಗಳು ಕಂಠ ನೀಡಿದ್ದಾಳಂತೆ. ಮುಂದೆ, ಈ ಹಾಡಿನ ವಿಡಿಯೊದಲ್ಲಿ ಆಕೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆಯಂತೆ.ಮಗಳೊಂದಿಗೆ ಹಾಡಿನ ವಿಡಿಯೊ ಮಾಡಿರುವುದು ಇದೇ ಮೊದಲು.
ಸುನೀಲ್ ಕೌಶಿಕ್ ಪಂಜಾಬಿ ಜಾನಪದ ಶೈಲಿಯ ಹಾಡುಗಳನ್ನು ದಲೇರ್ ಅವರಿಗಾಗಿ ಬರೆದಿದ್ದಾರೆ. ಬಿನಾಯಕ್ ದಾಸ್ ನಿರ್ಮಿಸಿರುವ ಈ ಚಿತ್ರದ ವಿತರಕರು ಯಶ್‌ರಾಜ್ ಫಿಲ್ಮ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.