ADVERTISEMENT

ರಜನಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 19:45 IST
Last Updated 13 ಜನವರಿ 2020, 19:45 IST
   

ರಜನಿಕಾಂತ್‌ ಅಭಿನಯದ ‘ದರ್ಬಾರ್‌’ ಚಿತ್ರ ಭಾರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಎರಡೇ ದಿನದಲ್ಲಿ ₹75 ಕೋಟಿ ಗಳಿಸಿದ ಚಿತ್ರವಿದು. ಈಗ ಈ ಚಿತ್ರದಲ್ಲಿ ಅಭಿನಯಕ್ಕಾಗಿ ಲೈಕಾ ಪ್ರೊಡಕ್ಷನ್‌ ಭಾರಿ ಮೊತ್ತದ ಸಂಭಾವನೆಯನ್ನು ರಜನಿಕಾಂತ್‌ಗೆ ನೀಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಬಿಡುಗಡೆ ದಿನದಿಂದಲೇ ‘ದರ್ಬಾರ್‌’ ಚಿತ್ರ ಉತ್ತಮ ಆರಂಭ ಮಾಡಿದೆ. ಮುಂದಿನ ಕೆಲ ವಾರಗಳ ತನಕ ಥಿಯೇಟರ್‌ಗಳಲ್ಲಿ ರಜನಿಕಾಂತ್‌ ಹವಾ ಮುಂದುವರಿಯಲಿದೆ.

ಸಿನಿಮಾದ ಥಿಯೇಟರ್‌ ಹಕ್ಕು ₹137 ಕೋಟಿಗೆ ಮಾರಾಟವಾಗಿದೆ. ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಹಕ್ಕು ₹83 ಕೋಟಿಗೆ ಮಾರಾಟವಾಗಿದೆ. ಹಾಗಾಗಿ ಬಿಡುಗಡೆಗೂ ಮುನ್ನ ಈ ಚಿತ್ರದ ಒಟ್ಟು ಸಂಪಾದನೆ ₹220 ಕೋಟಿ.

ADVERTISEMENT

ಈ ಚಿತ್ರವನ್ನು ₹200 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇಕಡ 70ರಷ್ಟು ನಟ ಹಾಗೂ ತಂತ್ರಜ್ಞರ ಸಂಬಳಕ್ಕೆ ನೀಡಲಾಗಿದೆ. ಹಾಗೇ ನೋಡಿದರೆ ಈ ಬಜೆಟ್‌ನ ಅರ್ಧದಷ್ಟು ದುಡ್ಡನ್ನು ರಜನಿಕಾಂತ್‌ಗೆ ಸಂಭಾವನೆಯಾಗಿ ನೀಡಲಾಗಿದೆ.

ಈ ಚಿತ್ರಕ್ಕೆ ರಜನಿಕಾಂತ್‌ ಪಡೆದ ಸಂಭಾವನೆ ಕುರಿತ ಸುದ್ದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರು ಪಡೆದ ಒಟ್ಟು ಸಂಭಾವನೆ ₹108 ಕೋಟಿಯಂತೆ. ಸಿನಿಮಾದಲ್ಲಿ ಅವರ ಶೇರ್‌ ಅನ್ನೂ ಸೇರಿಸಿ ಈ ಹಣ ನೀಡಲಾಗಿದೆಯೇ ಎಂಬುದು ಖಾತ್ರಿಯಾಗಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟ ಇವರಾಗಲಿದ್ದಾರೆ.

ಇದೇ ವೇಳೆ ಈ ಸಿನಿಮಾದಲ್ಲಿ ತನಗೆ ನೀಡಿದ ಸಂಭಾವನೆ ಬಗ್ಗೆ ನಯನತಾರಾ ಅಸಮಾಧಾನಗೊಂಡಿದ್ದಾರೆ ಎಂಬ ಗಾಳಿಸುದ್ದಿಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.