ADVERTISEMENT

ನಟ ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಡಿ.29ರಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 20:17 IST
Last Updated 30 ನವೆಂಬರ್ 2023, 20:17 IST
ದರ್ಶನ್‌ ಹಾಗೂ ಆರಾಧನಾ 
ದರ್ಶನ್‌ ಹಾಗೂ ಆರಾಧನಾ    

ತರುಣ್ ಸುಧೀರ್ ನಿರ್ದೇಶನದ, ನಟ ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಡಿ.29ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ರಾಕ್‌ಲೈನ್‌ ಎಂಟರ್‌ಟೈನ್ಮೆಂಟ್ಸ್‌ ತಿಳಿಸಿದೆ. 

2023ರಲ್ಲಿ ಬಿಡುಗಡೆಯಾಗುತ್ತಿರುವ ದರ್ಶನ್‌ ಅವರ ನಟನೆಯ ಎರಡನೇ ಸಿನಿಮಾ ಇದಾಗಿದೆ. ವರ್ಷದ ಆರಂಭದಲ್ಲಿ ‘ಕ್ರಾಂತಿ’ ಬಿಡುಗಡೆಯಾಗಿತ್ತು. ಬಹುನಿರೀಕ್ಷಿತ ಎರಡು ಪ್ಯಾನ್‌ ಇಂಡಿಯಾ ಸಿನಿಮಾಗಳ ಜೊತೆಗೇ ‘ಕಾಟೇರ’ ಬಿಡುಗಡೆಯಾಗುತ್ತಿದೆ. ಡಿ.21ರಂದು ಶಾರುಕ್‌ ಖಾನ್‌ ನಟನೆಯ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಹಾಗೂ ಡಿ.22ರಂದು ಪ್ರಭಾಸ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ರಿಲೀಸ್‌ ಆಗಲಿವೆ. ಇದಾದ ಒಂದೇ ವಾರದಲ್ಲಿ ‘ಕಾಟೇರ’ ತೆರೆಗೆ ಬರುತ್ತಿದೆ.     

‘‘ಗುರು ಶಿಷ್ಯರು’ ಚಿತ್ರದ ನಂತರ ನಿರ್ದೇಶಕರಾದ ತರುಣ್‌ ಹಾಗೂ ಜಡೇಶ್ ಸೇರಿ ‘ಕಾಟೇರ’ ಕಥೆ ಬರೆದಿದ್ದರು. ದರ್ಶನ್ ಅವರಿಗಾಗಿಯೇ ಈ ಸಿನಿಮಾ ಮಾಡಬೇಕು ಎಂದು ಕಥೆ ಹೆಣೆದಿದ್ದರು. ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರದ ನಾಯಕಿ. ಇದು ತರುಣ್‌ ಅವರ ನಿರ್ದೇಶನದ ಮೂರನೇ ಚಿತ್ರವಾಗಿದ್ದು, 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ ಹೊಂದಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಟರಾದ ಅವಿನಾಶ್, ಜಗಪತಿ ಬಾಬು, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಆರಾಧನಾ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.